ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಲಸಿಕಾ ಮೇಳದಲ್ಲಿ ತಲೆಸುತ್ತಿನಿಂದ ನೆಲಕ್ಕೆ ಬಿದ್ದ ನರ್ಸ್

Last Updated 28 ಅಕ್ಟೋಬರ್ 2021, 5:00 IST
ಅಕ್ಷರ ಗಾತ್ರ

ಯರಗೋಳ: ಬಂದಳ್ಳಿ ಗ್ರಾಮದಲ್ಲಿ ಬುಧವಾರ ಲಸಿಕೆ ಮೇಳದಲ್ಲಿ ಭಾಗವಹಿಸಿದ್ದ ನರ್ಸ್ ಒಬ್ಬರು ನಿಂತ ಜಾಗದಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ.

ಲಸಿಕಾ ಮೇಳದಲ್ಲಿ ಭಾಗವಹಿಸಿದ್ದ ನರ್ಸ್ಪುಷ್ಪಾಂಜಲಿ ಅವರು ವ್ಯಕ್ತಿಯೊಬ್ಬರಿಗೆ ಲಸಿಕೆ ನೀಡುವ ಸಮಯದಲ್ಲಿ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಜೊತೆಯಲ್ಲಿದ್ದ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ನೀರು ಕುಡಿಸಿದರೂ ಎಚ್ಚರಗೊಳ್ಳದೆ ಮೂರ್ಛೆ ಹೋಗಿದ್ದಾರೆ. ಕೂಡಲೇ ಯಾದಗಿರಿಯ ಶರಣಬಸವ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ, ರಕ್ತದೋತ್ತಡ ಹೆಚ್ಚಳಗೊಂಡಿದ್ದು, ತಪಾಸಣೆಯಿಂದ ತಿಳಿದು ಬಂದಿದೆ.

ನಂತರ ಜಿಲ್ಲಾ ಸರ್ಕಾರಿಯಲ್ಲಿ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

'ನರ್ಸ್‌ಗೆ ಯಾವುದೇ ತೊಂದರೆಯಿಲ್ಲ' ಎಂದು ಹತ್ತಿಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ರಾಮಕೃಷ್ಣ ರೆಡ್ಡಿ 'ಪ್ರಜಾವಾಣಿ' ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT