ಯಾದಗಿರಿ: ‘ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರು ‘ಬಸವಣ್ಣನವರ ಹಾಗೆ ಹೊಳೆಗೆ ಹಾರಬೇಕು’ ಎನ್ನುವ ಮೂಲಕ ಬಸವಣ್ಣನವರು ಅಸಮರ್ಥರು ಎಂಬರ್ಥದಲ್ಲಿ ಮಾತನಾಡಿರುವುದು ಅಕ್ಷಮ್ಯ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಮುಖಂಡ ಅವಿನಾಶ ಜಗನ್ನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಯತ್ನಾಳ ಅವರು ಬಿಜೆಪಿಯಲ್ಲಿ ಅಧಿಕಾರ ಸಿಗದೇ ತಮ್ಮ ಮಾತಿನ ಮೇಲೆ ಸ್ಥಿಮಿತ ಕಳೆದುಕೊಂಡು ಬಸವಣ್ಣನವರು ಹೊಳೆಗೆ ಹಾರಿದ್ದಾರೆ ಎಂಬರ್ಥದಲ್ಲಿ ಮಾತನಾಡಲು ಕಾರಣವಾಗಿದೆ ಎಂದು ಹೇಳಿದರು.

ತಮ್ಮ ಪಕ್ಷದಲ್ಲಿ ತಮ್ಮನ್ನು ಗುರುತಿಸಲಿ ಎಂದು ಮೊದಲು ತನ್ನ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಮಹಾಸಭೆಯ ಮೇಲೂ ಹರಿಹಾಯುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಅವರನ್ನು ಪರಿಗಣಿಸುತ್ತಿಲ್ಲ ಎಂಬ ನೋವು ಹತಾಶೆಯನ್ನು ಹೊರಹಾಕುವ ಭರದಲ್ಲಿ ಹೀಗೆ ಬಸವಣ್ಣನವರಿಗೆ ವೀರಶೈವ ಲಿಂಗಾಯತ ಮಹಾಸಭೆಯ ಬಗ್ಗೆ ಹಗುರ ಹೇಳಿಕೆ ನೀಡುತ್ತಿದ್ದಾರೆ. ಮೊದಲು ತಮ್ಮ ಮನಸ್ಥಿತಿ ಸ್ಥಿಮಿತಕ್ಕೆ ತಂದುಕೊಳ್ಳಲಿ. ಇಲ್ಲವೇ ಅವರ ಪಕ್ಷದ ನಾಯಕರು ಅವರಿಗೆ ಏನು ಬೇಕೊ ಅದನ್ನು ಕೊಡುವ ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ತಕ್ಷಣ ಯತ್ನಾಳರು ಬಸವಣ್ಣನವರ ಕ್ಷೇಮೆ ಕೇಳಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.