ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಮೇಲ್ತೊಟ್ಟಿಗೆ ಬಣ್ಣ ಹಚ್ಚಿ ಜೆಜೆಎಂ ನೀರು ಸಂಪರ್ಕ: ಹೋರಾಟದ ಎಚ್ಚರಿಕೆ

Published 7 ಮಾರ್ಚ್ 2024, 14:19 IST
Last Updated 7 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಸೈದಾಪುರ: ‘ಶಿಥಿಲಗೊಂಡಿರುವ ಮೇಲ್ಮಟ್ಟದ ನೀರು ಸಂಗ್ರಹಾಗಾರ(ಟ್ಯಾಂಕ್‌)ಕ್ಕೆ ಬಣ್ಣಬಳಿದು ಜೆಜೆಎಂ ನೀರಿನ ಸಂಪರ್ಕ ಕೊಡಲು ಅಧಿಕಾರಿಗಳು ಮುಂದಾಗಿದ್ದು, ಇದು ಕಾಮಗಾರಿಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕ್ಷಿ’ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.

ಸಮೀಪದ ಕಣೇಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 33 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಅಧಿಕಾರಿಗಳ ಅಕ್ರಮದಿಂದಾಗಿ ಹಳ್ಳಹಿಡಿದಿದೆ. ಜತೆಗೆ ವಿದ್ಯಾರ್ಥಿಗಳು ಜೀವ ಭೀತಿಯಲ್ಲಿ ಶಾಲೆಗೆ ತೆರಳುವಂತಾಗಿದೆ ಎಂದು ದೂರಿದರು.

ಟ್ಯಾಂಕ್‌ ಬೀಳುವ ಸ್ಥಿತಿಗೆ ತಲುಪಿದ್ದು, ತುಕ್ಕು(ಜಂಗು)ಹಿಡಿದ ಕಬ್ಬಿಣದ ಸರಳುಗಳು ಕಾಣುತ್ತಿವೆ. ಅಂತಹ ನೀರಿನ ಟ್ಯಾಂಕ್‌ಗೆ ಸುಣ್ಣ ಬಣ್ಣ ಮಾಡಿ, ಅದನ್ನು ಮರುನಿರ್ಮಾಣ ಮಾಡಿರುವಂತೆ ತೋರಿಸಿ, ಅಧಿಕಾರಿಗಳು ಹಣ ಎತ್ತಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಟ್ಯಾಂಕ್‌ ಶಿಥಿಲಗೊಂಡು ಅದರ ಮೇಲಿರುವ ಚಾವಣಿ ಉದುರಿ ಬಿದ್ದು ಪಾರಿವಾಳಗಳು, ಮಂಗಗಳು ಬಿದ್ದು ಸತ್ತುಹೋಗಿವೆ. ಅದನ್ನು ಸ್ವಚ್ಛಗೊಳಿಸಲು ಹೋಗಿದ್ದ ವ್ಯಕ್ತಿಯೊಬ್ಬ ಬಿದ್ದು ತಲೆ ಒಡೆದುಕೊಂಡು ಜೀವ ಉಳಿಸಿಕೊಂಡಿದ್ದಾನೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ತಕ್ಷಣ ಅದನ್ನು ನೆಲಸಮಗೊಳಿಸಬೇಕು. ಹೊಸ ಮೇಲತ್ತೊಟ್ಟಿ ನಿರ್ಮಿಸಬೇಕು. ಹೊಸದಾಗಿ ನೀರಿನ ಸಂಪರ್ಕ ನೀಡಬೇಕು. ತುರ್ತಾಗಿ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸೈದಾಪುರ ಪೊಲೀಸ್‌ ಠಾಣೆಯಲ್ಲಿ ಗ್ರಾ.ಪಂ ಪಿಡಿಒ, ತಾ.ಪಂ ಇಒ, ನೀರು ಸರಬರಾಜು ಕಿರಿಯ ಹಾಗೂ ಸಹಾಯಕ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರಫೀಕ್ ಪಟೇಲ, ಅಂಜನೇಯ, ಜಗದೀಶ ಹಿರೇಮಠ, ತಾಯಪ್ಪ, ಮಾದೇವಪ್ಪ, ನಾಗರಾಜ, ರಮೇಶ, ಜ್ಞಾನಪ್ಪ, ಮಲ್ಲು, ನಾಗರಡ್ಡಿ, ಹುಸೇನಪ್ಪ, ಹಣಮಂತ, ಶಿವಪ್ಪ, ಕಾಶಪ್ಪ ಸೇರಿ ಅನೇಕರಿದ್ದರು.

ಸೈದಾಪುರ ಸಮೀಪದ ಕಣೇಕಲ್ ಗ್ರಾಮದಲ್ಲಿ ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌ನ ಚಾವಣಿ
ಸೈದಾಪುರ ಸಮೀಪದ ಕಣೇಕಲ್ ಗ್ರಾಮದಲ್ಲಿ ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌ನ ಚಾವಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT