ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಮಹೋತ್ಸವ

Published : 19 ಆಗಸ್ಟ್ 2024, 16:41 IST
Last Updated : 19 ಆಗಸ್ಟ್ 2024, 16:41 IST
ಫಾಲೋ ಮಾಡಿ
Comments

ವಡಗೇರಾ: ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದ ನೂಲ ಹುಣ್ಣಿಮೆ ಪ್ರಯುಕ್ತ ಪಲ್ಲಕ್ಕಿ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಭಾನುವಾರ ಸಂಜೆ ಭೀಮಾ ನದಿಯಲ್ಲಿ ಗಂಗಾಸ್ನಾನ, ರಾತ್ರಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು, ಅಹೋರಾತ್ರಿ ಡೊಳ್ಳಿನ ಪದಗಳು, ಡೊಳ್ಳು ನೃತ್ಯ ಪ್ರದರ್ಶನ ನಡೆದವು. ಸೋಮವಾರ ನಸುಕಿನ ಜಾವ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಯಿಂದ ದೇವರ ಹೇಳಿಕೆ ನಡೆದವು.

ಬಳಿಕ ಅಪಾರ ಭಕ್ತ ಸಮೂಹ ಮಧ್ಯೆ ವಾದ್ಯಮೇಳ, ಬಾಜಾ ಭಜಂತ್ರಿಗಳೊಡನೆ ಗ್ರಾಮದ ಮುಖ್ಯ ರಸ್ತೆಯ ಹನುಮಾನ ದೇವಸ್ಥಾನದವರೆಗೆ ಪಲ್ಲಕ್ಕಿಯ ಅದ್ದೂರಿಯಿಂದ ಮೆರವಣಿ ನಡೆಯಿತು.

ಭಕ್ತರು ನೈವೈದ್ಯ ಅರ್ಪಿಸಿ, ಕಾಯಿಗಳನ್ನು ಒಡೆದು ಭಕ್ತಿಯನ್ನು ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ತಿಪ್ಪಣ್ಣ ಪೂಜಾರಿ, ಸಿದ್ದಪ್ಪ ಪೂಜಾರಿ, ಬೀರಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಈರಪ್ಪ ಪೂಜಾರಿ, ಮಹಾದೇವಪ್ಪ ಕನ್ನೋಳ್ಳಿ, ಶರಣಪ್ಪ ಪೂಜಾರಿ ಕನ್ನೋಳ್ಳಿ, ರಾಯಪ್ಪ ಕನ್ನೋಳ್ಳಿ, ಹುಚ್ಚಪ್ಪ ಪೂಜಾರಿ, ಶರಣಪ್ಪ ಕಾಡಂಗೇರಾ, ತಿಮ್ಮಯ್ಯ ಉಪ್ಪಾರ, ಭೀಮರಾಯ, ಮೋನಪ್ಪ ಗ್ವಂಡಿ, ಶರಣಪ್ಪ ಬೆಳಗೇರಾ, ಮರೆಪ್ಪ ಕಂಚಗಾರ, ಸಿದ್ದಪ್ಪ ದಿಡ್ಡಿಮನಿ, ಶಾಮ ಪೂಜಾರಿ, ಬೀರಪ್ಪ ಪೂಜಾರಿ, ಮೂರ್ತೆಪ್ಪ, ಶರಣಪ್ಪ, ಮಾಳಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ ಹಾಗೂ ಗ್ರಾಮದ ಪ್ರಮುಖರು ಸೇರಿದಂತೆ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT