ಮಂಗಳವಾರ, ಜೂನ್ 22, 2021
22 °C
ಜಿಲ್ಲೆಯ ವಿವಿಧ ನಗರ, ಪಟ್ಟಣ ಬಂದ್‌, ವ್ಯಾಪಾರಿಗಳು ಆಕ್ರೋಶ

ದಿಢೀರ್‌ ಲಾಕ್‌ಡೌನ್‌ಗೆ ಬೆಚ್ಚಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಗುರುವಾರ ಮಧ್ಯಾಹ್ನದ ನಂತರ ಬಂದ್‌ ಮಾಡಿದರು. ಇದರಿಂದ ರಾತ್ರಿ ಕರ್ಫ್ಯೂ ಮಾತ್ರ ಎಂದುಕೊಂಡಿದ್ದ ಜನರಿಗೆ ಅಂಗಡಿ ಮುಂಗಟ್ಟು ಬಂದ್‌ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲು ತಿಳಿಸಿದ್ದರಿಂದ ವ್ಯಾಪಾರಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖರೀದಿಗೆ ಬಂದಿದ್ದ ಜನತೆಯೂ ಇದರಿಂದ ದಂಗಾದರು.

ಶನಿವಾರ ಮತ್ತು ಭಾನುವಾರ ಮಾತ್ರ ಕರ್ಫ್ಯೂ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಉಳಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 9ರ ವರೆಗೆ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ಗುರುವಾರ ಮಧ್ಯಾಹ್ನವೇ ಬಂದ್‌ ಮಾಡಿರುವುದು ಒಂದು ರೀತಿಯ ವರ್ಷದ ಹಿಂದೆ ಮಾಡಿರುವ ಲಾಕ್‌ಡೌನ್‌ ನೆನಪಿಸುವಂತೆ ಇತ್ತು.

ದಿನಸಿ, ಕೃಷಿಗೆ ಪರಿಕರ ಅಂಗಡಿ, ಮೆಡಿಕಲ್‌, ಹಣ್ಣು-ತರಕಾರಿ ಮತ್ತು ಹಾಲಿನ ಅಂಗಡಿಗಳು ಸೇರಿದಂತೆ ಅವಶ್ಯಕ ವ್ಯಾಪಾರ ವಹಿವಾಟುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿಗಳಿಗೆ ಬೀಗ ಹಾಕುವಂತೆ ತಾಕೀತು ಮಾಡಿದ್ದಾರೆ. ಇದರಿಂದ ವ್ಯಾಪಾರಿಗಳು ವಿಚಲಿತರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು