ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಕೂರ ಬೆಟ್ಟದಲ್ಲಿ ಸಸಿ ನೆಡುವಿಕೆ

ನಿಸರ್ಗದಲ್ಲಿ ವ್ಯತ್ಯಾಸವಾಗಿ ಹಲವಾರು ಸಮಸ್ಯೆ ಎದುರು: ಜಾಗೀರ್‍ದಾರ
Last Updated 25 ಜುಲೈ 2020, 16:02 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದ ಬೆಟ್ಟದ ಮೇಲಿರುವ ಕೊಂಡಮ್ಮದೇವಿ ದೇವಸ್ಥಾನ ಆವರಣದಲ್ಲಿಕರ್ನಾಟಕ ಜನಸೇನಾ ಸಂಘಟನೆಯಿಂದ ಶನಿವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಸಂಘಟನೆಯ ರಾಜ್ಯ ಘಟಕ ಅಧ್ಯಕ್ಷ ಮೈಲಾರಪ್ಪ ಜಾಗೀರ್‍ದಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿ,ನಾವು ಪರಿಸರ ರಕ್ಷಣೆ ಮಾಡಿದರೆ ಮಾತ್ರ ಸಮಾಜದಲ್ಲಿ ಆರೋಗ್ಯದಿಂದ ಬಾಳಲು ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ.ಯುವಕರು ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಾವು ಮಾಡುತ್ತಿರುವ ಕೆಲವು ತಪ್ಪುಗಳಿಂದ ನಿಸರ್ಗದಲ್ಲಿ ವ್ಯತ್ಯಾಸವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಯುವಕರು ಪರಿಸರ ರಕ್ಷಣೆ ಕುರಿತು ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಈ ವೇಳೆ ಸಂಘಟನೆಯ ಅನಿಲರೆಡ್ಡಿ ಕಂದಕೂರು, ಅಶೋಕ ಐಕೂರ, ಮಂಜುನಾಥ ಬಡಿಗೇರ ಬಾಚವಾರ, ಮಲ್ಲಿಕಾರ್ಜುನ ಹೊನಗೇರಾ, ನಾಗಪ್ಪ ಬೋಯಿನ್, ಸಾಯಿರೆಡ್ಡಿ ಗುರುಮಿಠಕಲ್, ಸಿದ್ದು ಮಾದ್ವಾರ, ಪರಶುರಾಮ್ ಬಂದಳ್ಳಿ, ಶರಣರೆಡ್ಡಿ ಕಂದಕೂರ ಸೇರಿದಂತೆ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT