ಭಾನುವಾರ, ಜನವರಿ 23, 2022
20 °C

ಸಂಭ್ರಮದ ಪೂಲಬಾವಿ ಬಲಭೀಮೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಸಮೀಪದ ಪೂಲಬಾವಿ ಗ್ರಾಮದ ಬಲಭೀಮೇಶ್ವರ ಜಾತ್ರೋತ್ಸವ ಅಂಗವಾಗಿ ಭಾನುವಾರ ಸಂಜೆ ಸಂಭ್ರಮದ ರಥೋತ್ಸವ ಜರುಗಿತು.

ಶನಿವಾರ ರಾತ್ರಿ ದೇವರ ಗಂಗಸ್ಥಳ ನಡೆಯಿತು. ಪ್ರಭಾವತಿ ಹಾಗೂ ಸಂಗಡಿಗರಿಂದ ಅಹೋರಾತ್ರಿ ಭಜನೆ ನಡೆಯಿತು. ಜಾತ್ರೆ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ ಟೂರ್ನಿ ಗಮನ ಸೆಳೆಯಿತು.

ಭಾನುವಾರ ಬೆಳಿಗ್ಗೆ ಭಕ್ತರಿಂದ ದೀಡ್ ನಮಸ್ಕಾರ, ಛತ್ರಿ, ಗಂಟೆಗಳ ಅರ್ಪಣೆ, ನೈವೇದ್ಯ, ಕಾಯಿ ಕರ್ಪೂರ ಅರ್ಪಿಸುವ ಕಾರ್ಯಕ್ರಮಗಳ ಜತೆಗೆ ಡೊಳ್ಳು ವಾದ್ಯಗಳ ನಡುವೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಭೀಮಣ್ಣ ಮುತ್ಯಾರಿಂದ ದೇವರ ಹೇಳಿಕೆ ಮುಗಿದ ಮೇಲೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಸಂಜೆ ಭೀಮಣ್ಣ ಮುತ್ಯಾ ರಥ ಎಳೆಯುವುದಕ್ಕೆ ಚಾಲನೆ ನೀಡಿದರು. ನೆರೆದ ಸಹಸ್ರಾರು ಭಕ್ತ ಸಮೂಹ ರಥಕ್ಕೆ ಉತ್ತತ್ತಿ, ಹೂ ಅರ್ಪಿಸಿ ಪೂಲಬಾವಿ ಬಲಭೀಮೇಶ್ವರ ಮಹಾರಾಜಕೀ ಜೈ... ಎಂದು ಜೈಕಾರ ಹಾಕುತ್ತಾ, ಸಿಡಿಮದ್ದುಗಳ ಚಿತ್ತಾರದ ಮಧ್ಯೆ ರಥ ಎಳೆದು ಕೃತಾರ್ಥರಾದರು. 

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ಜಾತ್ರೆಗೆ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ರಥೋತ್ಸವದಲ್ಲಿ ಭಾಗಿಯಾಗಿದ್ದು, ತೀವ ಸಂತಸ ತಂದಿದೆ ಎಂದು
ಭಕ್ತರೊಬ್ಬರು ತಿಳಿಸಿದರು.

ಹಿರಿಯರಾದ ನಂದಣ್ಣಪ್ಪ ಪೂಜಾರಿ, ಸೋಮನಿಂಗಪ್ಪ ಪೂಜಾರಿ, ವರದಾನೇಶ್ವರ ಗೊಲಪಲ್ಲಿ,  ಹಣಮಂತರಾಯಗೌಡ ಜಹಾಗೀರದಾರ, ಗುಂಡಪ್ಪ ಸೊಲಾಪುರ, ರಾಜು ಹವಾಲ್ದಾರ್, ಪರಮಣ್ಣ ಪೂಜಾರಿ, ದಶರಥ ಆರೇಶಂಕರ, ಚಿದಾನಂದ ಕಮತಗಿ, ನಂದಣ್ಣ ಮಾಸ್ತರ ಜಾಲಿಬೆಂಚಿ, ಪರಮಣ್ಣ ಕಮತಗಿ, ಜೆಟ್ಟೆಪ್ಪ ದಳಾ, ಪರಮಣ್ಣ ತೇರಿನ್ ಇದ್ದರು.

ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಪಿಎಸ್ಐ ಬಾಷುಮಿಯಾ ಮಾರ್ಗದರ್ಶನದಲ್ಲಿ ಎಎಸ್ಐ ಮಧುನಾಯಕ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.