ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್ ಹಬ್ಬಕ್ಕೆ ಭರದ ಸಿದ್ಧತೆ

ರಿಯಾಯ್ತಿ ದರದಲ್ಲಿ ಬಟ್ಟೆ, ಅಗತ್ಯ ವಸ್ತುಗಳ ಖರೀಸುತ್ತಿರುವ ಮುಸ್ಲಿಮರು
Last Updated 1 ಜೂನ್ 2019, 15:57 IST
ಅಕ್ಷರ ಗಾತ್ರ

ಯಾದಗಿರಿ: ರಂಜಾನ್ ಹಬ್ಬ ಆಚರಣೆಗೆ ಇನ್ನು ಎರಡ್ಮೂರು ಬಾಕಿ ಇದೆ. ನಗರದಲ್ಲಿ ಹಬ್ಬದ ಸಿದ್ಧತೆ ಭರದಿಂದ ಸಾಗಿದೆ. ಖರೀದಿ ಭರಾಟೆಯೂ ಜೋರಾಗಿದೆ. ಅಲ್ಲದೆ, ಅಂಗಡಿಗಳಲ್ಲಿ ರಂಜಾನ್ ಹಬ್ಬದ ರಿಯಾಯ್ತಿ ದರವೂ ನೀಡಲಾಗುತ್ತಿದೆ.

ನಗರದಲ್ಲಿ 35ಕ್ಕೂ ಹೆಚ್ಚು ಮಸೀದಿಗಳಿದ್ದು, ಮುಸ್ಲಿಮರು ಹಬ್ಬದ ಸಿದ್ಧತೆಗಾಗಿ ತೊಡಗಿಸಿಕೊಂಡಿದ್ದಾರೆ. ನಗರದಲ್ಲಿ ಶೇಕಡ 40 ರಷ್ಟು ಮುಸ್ಲಿಮರು ಇದ್ದಾರೆ. ನಗರದ ವಿವಿಧ ಅಂಗಡಿಗಳಲ್ಲಿ ಶೇಕಡ 20ರಿಂದ 30ರಷ್ಟು ಚಪ್ಪಲಿ, ಬಟ್ಟೆ ಮೇಲಿನ ರಿಯಾಯ್ತಿ ದರ ಗ್ರಾಹಕರನ್ನು ಸೆಳೆಯುತ್ತಿದೆ.

ಗಾಂಧಿ ಚೌಕ್ ಬಳಿ ರಂಜಾನ್ ಶಾಪಿಂಗ್‌ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ. ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹೆಂದಿ, ಬಳೆ, ವಿಧವಿಧವಾದ ಕಿವಿಯೋಲೆ, ಮುತ್ತುಗಳಿಂದ ಮಾಡಿರುವ ಬಳೆ ಇನ್ನಿತರ ವಸ್ತುಗಳನ್ನು ಖರೀಸುತ್ತಿದ್ದರು. ಕೆಲ ಅಂಗಡಿಗಳಲ್ಲಿ ಹಬ್ಬದ ಖರೀದಿಗಾಗಿ ಮುಸ್ಲಿಮರು ಕುಟುಂಬ ಸಮೇತ ಬಂದಿದ್ದರು. ಪುರುಷರು ಹಬ್ಬಕ್ಕಾಗಿ ಹೊಸಬಟ್ಟೆ, ಟೋಪಿ, ಕರವಸ್ತ್ರ, ಸುಗಂಧ ದ್ರವ್ಯ, ಪ್ರಾರ್ಥನೆ ಮ್ಯಾಟ್ ಖರೀಸುತ್ತಿದ್ದರು.

ಬಟ್ಟೆ ಅಂಗಡಿಗಳಲ್ಲಿ ಚಿಣ್ಣರು, ಮಹಿಳೆಯರು ಬಟ್ಟೆ ಖರೀದಿಸುವ ದೃಶ್ಯ ಎಲ್ಲೆಡೆ ಕಂಡು ಬಂದಿತು. ಹಬ್ಬಕ್ಕಾಗಿ ವಿಶೇಷ ಬಣ್ಣದ ಬಟ್ಟೆಗಳು ಮಾರುಕಟ್ಟೆಗೆ ಬಂದಿದ್ದವು. ಮಕ್ಕಳಿಗೆ ವಿಶೇಷ ವಿನ್ಯಾಸದ ಫ್ರಾಕ್ ಮತ್ತು ಬಟ್ಟೆ ಬಂದಿದ್ದವು.

*
ರಂಜಾನ್‌ ಮಾಸದಲ್ಲಿ ಕೆಟ್ಟ ಮಾತು, ನೋಟದಿಂದ ದೂರವಿರಬೇಕು. ಹೊಟ್ಟೆ ಉಪವಾಸ ಮಾತ್ರವಲ್ಲದೆ ಎಲ್ಲ ಆವಯವಗಳಿಂದ ದೂರವಿದ್ದು, ಕೆಡುಕನನ್ನು ಗೆಲ್ಲುವುದಾಗಿದೆ.
-ಮಹಮ್ಮದ್ ಅಬ್ದುಲ್ಲಾ ಹಜೀಜ್ ಸಾಹೇಬ, ಮೌಲ್ವಿ

*
ಪ್ರತಿಯೊಬ್ಬ ಮುಸ್ಲಿಮರು ಈ ರಂಜಾನ್ ಮಾಸದಲ್ಲಿ ಉಪವಾಸ ವ್ರತಾಚರಣೆ ಮಾಡುವುದು ಕಡ್ಡಾಯವಾಗಿದೆ. ಅಲ್ಲದೇ ಈ ಮಾಸದಲ್ಲಿ ಮಾಡಿದ ಪ್ರಾರ್ಥನೆ ಬೇಗನೆ ಫಲಿಸುತ್ತದೆ.
-ಮೌಲಾನಾ ಶೈಕ್ ಫರೀದ್ದೀನ್ ರೆಹಮಾನಿ, ಮೌಲ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT