ಮಂಗಳವಾರ, ಅಕ್ಟೋಬರ್ 27, 2020
22 °C
ತರಕಾರಿ, ಸೊಪ್ಪುಗಳ ದರದಲ್ಲಿ ಈ ವಾರ ಏರಿಳಿತ, ಕೆಲ ತರಕಾರಿಗಳ ಅಭಾವ

ದೊಣ್ಣೆಮೆಣಸಿನಕಾಯಿ, ಗಜ್ಜರಿ ಬೆಲೆ ಏರಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತರಕಾರಿ, ಸೊಪ್ಪುಗಳ ದರದಲ್ಲಿ ಕಳೆದ ವಾರಕ್ಕಿಂತ ಈ ವಾರ ಏರಿಳಿತವಾಗಿದೆ. ಆದರೆ, ಕೆಲ ತರಕಾರಿಗಳ ಅಭಾವ ಉಂಟಾಗಿದೆ.

ಕೆಲ ತರಕಾರಿಗಳು ಮಾರುಕಟ್ಟೆಗೆ ಬಾರದಿದ್ದರಿಂದ ಅವುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಗ್ರಾಹಕರು ಚೌಕಾಶಿಗೆ ಇಳಿದಿದ್ದಾರೆ. ಆದರೆ, ವ್ಯಾಪಾರಿಗಳು ಕಡಿಮೆ ಬೆಲೆಗೆ ಕೊಡುವುದಕ್ಕೆ ಒಪ್ಪುತ್ತಿಲ್ಲ.

ಕಳೆದ ವಾರಕ್ಕಿಂತ ಟೊಮೆಟೊ ಬೆಲೆಗೆ ಕೇ.ಜಿ. ₹10 ಕಡಿಮೆಯಾಗಿದೆ. ಈಗ ಕೇ.ಜಿ.ಗೆ ₹30 ರಂತೆ ಮಾರಾಟವಾಗುತ್ತಿದೆ. ಬೆಂಡೆಕಾಯಿ ಕಳೆದ ವಾರಕ್ಕಿಂತ ₹20 ಹೆಚ್ಚಳವಾಗಿದ್ದು, ಕೇ.ಜಿ. ₹60 ಇದೆ. ದೊಣ್ಣೆಮೆಣಸಿನಕಾಯಿ ಕಳೆದ ವಾರ ₹50 ಕೇ.ಜಿ. ಇದ್ದಿದ್ದು, ಈ ವಾರ ₹80 ಕೇ.ಜಿ. ಆಗಿದೆ.

ಈರುಳ್ಳಿ ಬೆಲೆಯೂ ಇಳಿಕೆಯಾಗಿದೆ. ಕಳೆದ ವಾರ ₹50 ಕೇ.ಜಿ. ಇದ್ದಿದ್ದು, ಈ ವಾರ ₹40 ಕೇ.ಜಿ. ಆಗಿದೆ. ಬೀನ್ಸ್ ಬೆಲೆ ಈ ವಾರ ₹100 ಕೇಜಿ ಇದೆ. ಗಜ್ಜರಿ ಬೆಲೆ ಮಾತ್ರ ಕಳೆದ ವಾರಕ್ಕಿಂತ ₹40 ಹೆಚ್ಚಳವಾಗಿ ಈಗ ₹100 ಕ್ಕೆ ಮಾರಾಟ ಆಗುತ್ತಿದೆ. ಬೀಟ್‌ರೂಟ್ ₹40 ಇದ್ದಿದ್ದು, ₹ 60ಕ್ಕೆ ಹೆಚ್ಚಳವಾಗಿದೆ. ಅದರಂತೆ ಸೌತೆಕಾಯಿ, ಹಾಗಲಕಾಯಿ ಕಳೆದ ವಾರಕ್ಕಿಂತ ಈ ವಾರ ₹20 ಹೆಚ್ಚಳವಾಗಿದೆ.

ಬದನೆಕಾಯಿ, ಆಲೂಗಡ್ಡೆ, ಹೂಕೋಸು, ಎಲೆಕೋಸು, ಚವಳೆಕಾಯಿ, ಮೆಣಸಿನಕಾಯಿ, ಹೀರೆಕಾಯಿ, ಸೋರೆಕಾಯಿ ಕಳೆದ ವಾರದಂತೆ ಒಂದೇ ದರ ಇದೆ.

ಸೊಪ್ಪುಗಳ ದರ: ಸೊಪ್ಪುಗಳ ದರ ಕಳೆದ ವಾರದಂತೆ ಯಥಾಸ್ಥಿತಿ ದರ ಕಾಪಾಡಿಕೊಂಡಿದೆ. ಆದರೆ, ಮೆಂತೆ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ದರ ಹೆಚ್ಚಳವಾಗಿದೆ.

ಪಾಲಕ್ ಸೊಪ್ಪು ₹20ಗೆ 3 ಕಟ್ಟು, ಸಬ್ಬಸಿಗೆ ₹10ಗೆ 1 ಕಟ್ಟು, ಮೆಂತೆ ₹30ಗೆ 1 ಕಟ್ಟು, ರಾಜಗಿರಿ ಸೊಪ್ಪು ₹20ಗೆ 3 ಕಟ್ಟು, ಪುಂಡಿ ಪಲ್ಯೆ ₹20ಗೆ 3 ಕಟ್ಟು ಇದೆ. ಕೊತ್ತಂಬರಿ ಕಳೆದ ವಾರ ₹30ಗೆ ಒಂದು ಕಟ್ಟು ಮಾರಾಟವಾಗುತ್ತಿತ್ತು. ಈ ವಾರ ₹50ಗೆ ಒಂದು ಕಟ್ಟು ಬೆಲೆ ಇದೆ. ಅದರಂತೆ ಪುದೀನಾ ಬೆಲೆಯೂ ಕಳೆದ ವಾರಕ್ಕಿಂತ ₹20 ಹೆಚ್ಚಳವಾಗಿ ₹50 ಆಗಿದೆ. ಈರುಳ್ಳಿ ಸೊಪ್ಪು ₹80 ಕೇ.ಜಿ., ಬೆಳ್ಳುಳ್ಳಿ ಕೇ.ಜಿ. ₹160, ಶುಂಠಿ ₹100 ಕೇ.ಜಿ. ಇದೆ.

***

ಕೆಲ ತರಕಾರಿಗಳು ಮಾರುಕಟ್ಟೆಯಲ್ಲಿ ಅಭಾವ ಉಂಟಾಗಿದ್ದು, ದರ ಹೆಚ್ಚಳವಾಗಿವೆ

–ಅಬ್ದುಲ್ ಹಮೀದ್, ವ್ಯಾಪಾರಿ

***

ಕಳೆದ ವಾರದಂತೆ ತರಕಾರಿ ದರ ಕಡಿಮೆ ಇದ್ದರೂ ಕೆಲ ತರಕಾರಿಗಳು ಸಿಗುತ್ತಿಲ್ಲ. ಹೀಗಾಗಿ ಅವುಗಳ ಬೆಲೆ ಜಾಸ್ತಿಯಾಗಿದೆ

–ಮಲ್ಲಿನಾಥ ಅಲ್ಲಿಪುರ, ಗ್ರಾಹಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು