ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಕಾಗಿಣಾ ನದಿಯ ಸೇತುವೆಗೆ ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ ಅವರು ಭಾನುವಾರ ಸುರಿಯುವ ಮಳೆಯಲ್ಲೇ ಭೇಟಿ ನೀಡಿ ಪರಿಶೀಲಿಸಿದರು.
ಸೇತುವೆ ಮೇಲಿನ ಸಿಮೆಂಟ್ ರಸ್ತೆ ಹಾನಿ, ಸೇತುವೆ ಸ್ಥಿತಿಗತಿ, ಸಂಚಾರ ಸಮಸ್ಯೆ, ಪ್ರವಾಹ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸೇಡಂ ಉಪ ವಿಭಾಗಾಧಿಕಾರಿ ಆಶಪ್ಪ, ತಹಶೀಲ್ದಾರ್ ಸೈಯದ್ ಷಾಷಾವಲಿ, ತಾಲ್ಲೂಕು ಪಂಚಾಯಿತಿ ಇಒ ನೀಲಗಂಗಾ ಬಬಲಾದ, ಲೋಕೋಪಯೋಗಿ ಇಲಾಖೆಯ ಸೇಡಂ ವಿಭಾಗದ ಇಇ ಪರಬಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರು, ಜೆಇ ಶಮಶೋದ್ದಿನ್ ಇದ್ದರು.