ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೆಸ್ಕಾಂ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಿ’

ವಿದ್ಯುತ್ ಸುರಕ್ಷತಾ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರ
Last Updated 12 ಜುಲೈ 2019, 15:40 IST
ಅಕ್ಷರ ಗಾತ್ರ

ಯಾದಗಿರಿ: ಕಿರಿಯ ಮಾರ್ಗದಾಳುಗಳು ಕಡ್ಡಾಯವಾಗಿ ಸುರಕ್ಷತಾ ಉಪಕರಣ ಬಳಸಬೇಕು ಹಾಗೂ ಸುರಕ್ಷತೆಗೆ ಆದ್ಯತೆ ನೀಡಿ ವಿದ್ಯುತ್‍ನ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ರಾಘವೇಂದ್ರ ಸೂಚಿಸಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜೆಸ್ಕಾಂ ಅಪಘಾತರಹಿತ ಕಂಪನಿಯಾಗಿ ಪರಿವರ್ತಿಸಲು ಹಾಗೂ ಕೆಇಆರ್‍ಸಿ ಸೂಚನೆ ಮೇರೆಗೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಯಾದಗಿರಿ ವಿಭಾಗದಲ್ಲಿ ಹೊಸದಾಗಿ ನೇಮಕಗೊಂಡಿರುವ ಕಿರಿಯ ಮಾರ್ಗದಾಳುಗಳಿಗೆ ವಿದ್ಯುತ್ ಸುರಕ್ಷತಾ ಜಾಗೃತಿ, ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಿರಿಯ ಮಾರ್ಗದಾಳುಗಳು ಕೆಲವೊಂದು ಸುರಕ್ಷತಾ ಸಮಸ್ಯೆಗಳನ್ನು ಅವಗಾಹನೆಗೆ ತಂದಿದ್ದು, ಅವುಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಕೆಲವೊಂದನ್ನು ಶೀಘ್ರದಲ್ಲಿಯೇ ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಕಿರಿಯ ಮಾರ್ಗದಾಳುಗಳಿಗೆ ವಿವಿಧ ರೀತಿಯ ವಿದ್ಯುತ್ ಸುರಕ್ಷತೆ ಬಗ್ಗೆ ಬೋಧನಕಾರರು ಸಲಕರಣೆಗಳ ಜೊತೆಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಸಂಜೀವಕುಮಾರ, ಸುಜೀತಕುಮಾರ, ಸುರೇಖಾ ಡಿ.ಕಟ್ಟಿಮನಿ, ಜೆಸ್ಕಾಂ ಜಾಗೃತದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಇಲಿಯಾಸ್ ಅಹಮ್ಮದ್, ಸಹಾಯಕ ಎಂಜಿನಿಯರ್ ಎ.ಟಿ.ರಾಠೋಡ, ಲೆಕ್ಕಾಧಿಕಾರಿ ರಾಜು ಪತ್ತಾರ, ಅಗ್ನಿಶಾಮಕ ದಳದ ಪ್ರವೀಣಕುಮಾರ, ಕೆಂಭಾವಿ ಶಾಖಾಧಿಕಾರಿ ಶ್ರೀಶೈಲ್, ಯಾದಗಿರಿ ಶಾಖಾಧಿಕಾರಿ ವೀರಭದ್ರಯ್ಯಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT