ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ’

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 22 ಏಪ್ರಿಲ್ 2022, 5:12 IST
ಅಕ್ಷರ ಗಾತ್ರ

ವಾಡಿ: ‘ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು ₹1 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಮಾಡಬೇಕಾದರೆ ಮೊದಲು ₹40 ಲಕ್ಷ ಕಮಿಷನ್ ಕೊಡಲೇಬೇಕಾಗಿದೆ. ಇದು ರಾಜ್ಯ ಸರ್ಕಾರದ ಭ್ರಷ್ಟಚಾರಕ್ಕೆ ಹಿಡಿದ ಕನ್ನಡಿ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಹಲಕಟ್ಟಾ ಗ್ರಾಮದ ಯಾದಗಿರಿ ಮುಖ್ಯ ರಸ್ತೆಯಿಂದ ಆರ್.ಬಿ.ಚವ್ಹಾಣ್ ತಾಂಡಾವರೆಗೆ ₹178.91 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಬಿಜೆಪಿ ನಾಯಕರೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತದೆ. 57,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.‌ ಈಗ ಅವರ ಗತಿ ಏನಾಗಬೇಕು ? ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರ‌ ಮುಂದಿನ ಕತೆ ಏನು ? ಎಂದು ಪ್ರಶ್ನಿಸಿದರು.

ನಾನು ಸಮಾಜಕಲ್ಯಾಣ‌ ಸಚಿವನಾಗಿದ್ದ ಸಮಯದಲ್ಲಿ ದಾವಣಗೆರೆ ಜಿಲ್ಲೆ ಸೊರಗೊಂಡನಕೊಪ್ಪ ಗ್ರಾಮದಲ್ಲಿ ಸಂತ ಸೇವಲಾಲ್ ಆಶ್ರಮ ಅಭಿವೃದ್ದಿಗೆ ₹150 ಕೋಟಿ‌ ಬಿಡುಗಡೆ ಮಾಡಿದ್ದೆ. ತಾಂಡಾ ಅಭಿವೃದ್ದಿ‌ ನಿಗಮದಿಂದ 4500 ಟ್ಯಾಕ್ಸಿಗಳನ್ನು ಕೊಟ್ಟಿದ್ದೇವೆ,‌‌ ತಾಂಡಾಗಳ ಅಭಿವೃದ್ದಿಗೆ ₹100 ಕೋಟಿ ಬಿಡುಗಡೆ ಮಾಡಿದ್ದೆ. ಈ‌ ಸಲ ಬಿಜೆಪಿ ಸರ್ಕಾರ ಕೇವಲ 2 ಟ್ಯಾಕ್ಸಿ ಮಾತ್ರ ಬಿಡುಗಡೆ ಮಾಡಿದೆ. ಇದು ಅಭಿವೃದ್ದಿನಾ? ಎಂದು ಪ್ರಶ್ನಿಸಿದರು.

ಶಿವಾನಂದ ಪಾಟೀಲ್, ರಮೇಶ್ ಮರಗೋಳ ಮಾತನಾಡಿದರು.

ಭೀಮಣ್ಣ ಸಾಲಿ, ಮಹೆಮೂದ ಸಾಹೇಬ, ಅಜೀಜ ಸೇಠ, ಸಿದ್ದು ಪಾಟೀಲ್, ಜಗದೀಶ ಸಿಂಧಿಯಾ, ರಾಘವೇಂದ್ರ ಅಲ್ಲಿಪುರ, ಸಿದ್ದು ಮುಗುಟಿ, ಗೋವಿಂದ ಜಾಧವ, ಗುರುನಾಥ ಮಣಿಗಿರಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT