ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ತೆರವು: ವ್ಯಾಪಾರ ವಹಿವಾಟು ಸರಾಗ

ಜೆಡಿಎಸ್‌ ಮುಖಂಡ ಶರಣಗೌಡ ಧರಣಿ ಕೈಬಿಟ್ಟ ಹಿನ್ನೆಲೆ
Last Updated 25 ಅಕ್ಟೋಬರ್ 2019, 11:23 IST
ಅಕ್ಷರ ಗಾತ್ರ

ಯಾದಗಿರಿ: ಜೆಡಿಎಸ್‌ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನಡೆಸುತ್ತಿದ್ದ ಉಪವಾಸ ಧರಣಿ ಸತ್ಯಾಗ್ರಹ ವಿಕೋಪಕ್ಕೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಗಾಂಧಿ ವೃತ್ತದ ಸುತ್ತ1 ಕೀ. ಮೀ. ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆಯನ್ನು ಗುರುವಾರರಾತ್ರಿತೆರವುಗೊಳಿಸಲಾಗಿದೆ.

ಜೆಡಿಎಸ್‌ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಕುರಿತು ನ್ಯಾಯ ದೊರಕಿಸಿಕೊಡುವಂತೆ ಶರಣಗೌಡ ಕಂದಕೂರ ಅವರು ನಗರ ಪೊಲೀಸ್‌ ಠಾಣೆ ಎದುರು ಅಹೋರಾತ್ರಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.

ಧರಣಿ ಸತ್ಯಾಗ್ರಹ ವಿಕೋಪಕ್ಕೆ ತಿರುಗುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬುಧವಾರ ನಗರಕ್ಕೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ತೆರೆದ ಅಂಗಡಿ ಮುಂಗಟ್ಟುಗಳು:
ಗುರುವಾರ ಗಾಂಧಿ ವೃತ್ತದಲ್ಲಿನ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಸ್ತೆ ಬದಿಯಲ್ಲಿನ ವ್ಯಾಪಾರವು ಸರಾಗವಾಗಿ ನಡೆಯುತ್ತಿರುವುದು ಕಂಡು ಬಂತು. ಬುಧವಾರ ಬಹುತೇಕ ಅಂಗಡಿಗಳು ಬಂದ್‌ ಆಗಿದ್ದವು.

ಗುರುವಾರ ರಾತ್ರಿ 9 ಗಂಟೆ ವರೆಗೆ ನಿಷೇಧಾಜ್ಞೆ ತೆರವುಗೊಳಿಸಲಾಗುವುದುಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT