ಬುಧವಾರ, ಜನವರಿ 27, 2021
24 °C

ಯಾದಗಿರಿ: ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ- ಹನುಮೇಗೌಡ ಬೀರನಕಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು. 

ಜಾತ್ಯತೀತ ಜನತಾ ದಳ ಜಿಲ್ಲಾ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕೊರೊನಾ ಸೋಂಕು ಎಲ್ಲ ಕಡೆಯೂ ಹಬ್ಬಿದ್ದು, ಸಾರ್ವಜನಿಕರು ಜಾಗರೂಕರಾಗಿ ನಡೆದುಕೊಳ್ಳಬೇಕಿದೆ. ಮಾಸ್ಕ್‌ ಧರಿಸಬೇಕು. ಆಗಾಗ ಕೈಗಳಿಗಳಿಗೆ ಸ್ಯಾನಿಟೈಸ್‌ ಹಾಕಿಕೊಳ್ಳಬೇಕು. ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು ಎಂದರು. 

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರಾಧ್ಯಕ್ಷ ವಿಶ್ವನಾಥ ಸಿರವಾರ, ನಾಗರತ್ನಾ ಅನಪುರ, ದಂಡಪ್ಪಗೌಡ ಉಳ್ಳೆಸುಗೂರು, ಶರಣಪ್ಪ ಗುಳಗಿ, ಬಾಲಪ್ಪ ಚಿಕ್ಕಮೇಟಿ, ಶಿವಪ್ಪ ಮುಷ್ಟೂರು, ಮಲ್ಲಿಕಾರ್ಜುನ ಮೇಟಿ, ಮಲ್ಲಿಕಾರ್ಜುನಗೌಡ ಬೀರನಕಲ್, ರಫೀಕ್ ಪಟೇಲ್ ಉಳ್ಳೆಸುಗೂರು, ಬಂದಪ್ಪ ಅರಳಿ, ಶರಣು ಪಡಶೆಟ್ಟಿ, ಅಬ್ದುಲ್ ಖಯ್ಯುಂ ಇನಾಂದಾರ, ರಾಜಶೇಖರ ದೊರಿ, ಯಂಕಪ್ಪ ಗೋಸಿ, ರಾಜಕುಮಾರ ಸಾಹುಕಾರ ಖಾನಾಪೂರ, ಮಹೇಶಗೌಡ ನಾಯಕ ಬೀರನಕಲ್, ಮಾಣಿಕಪ್ರಭು, ಶರಣು ಪೂಜಾರಿ, ವಿಶ್ವನಾಥ ಮಾಲಿಪಾಟೀಲ  ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು