ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಲಂ ನಿವಾಸಿಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಿ

ಜಿಲ್ಲಾಧಿಕಾರಿಗೆ ಮನವಿ ಪತ್ರ
Last Updated 8 ಫೆಬ್ರುವರಿ 2023, 7:15 IST
ಅಕ್ಷರ ಗಾತ್ರ

ಯಾದಗಿರಿ: ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಲಂ ನಿವಾಸಿಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಿ, ವರ್ಷದಲ್ಲಿ 200 ದಿನಗಳ ಕೆಲಸ ನೀಡುವಂತಹ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ನಗರ ಜನಸಂಖ್ಯೆಯ ಶೇ 40 ಜನರು 3,699 ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದರಲ್ಲಿ 2,780 ಕೊಳಚೆ ಪ್ರದೇಶಗಳು ಕಾನೂನು ವ್ಯಾಪ್ತಿಗೆ ಒಳಪಟ್ಟಿದ್ದು, 1973ರಲ್ಲಿ ಜಾರಿಯಾದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಕಾಯ್ದೆ ಮತ್ತು 2016ರ ಕರ್ನಾಟಕ ಕೊಳಗೇರಿಗಳ ಸಮಗ್ರ ಅಭಿವೃದ್ಧಿ ನೀತಿ ಅನ್ವಯ ಜನಸಂಖ್ಯೆವಾರು ಪಾಲು ನೀಡಿ 2023-24ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೊಳಗೇರಿಗಳ ಸಮಗ್ರ ಅಭಿವೃದ್ಧಿಗೆ ₹1 ಸಾವಿರ ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಕೊಳಚೆ ಪ್ರದೇಶಗಳ ಅಭಿೃದ್ಧಿಗೆ ₹2,000 ಸಾವಿರ ಕೋಟಿ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಲ್ಲಿ ಸಬ್ಸಿಡಿ ₹6 ಲಕ್ಷ ಹೆಚ್ಚಳ ಮತ್ತು ಹಕ್ಕು ಪತ್ರ ನೋಂದಣಿಗೆ ಆಗ್ರಹಿಸಿದರು.

ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈ ಹಿಂದೆ ನೀಡುತ್ತಿದಂತೆ 10 ಕೆ.ಜೆ ಅಕ್ಕಿ ನೀಡಬೇಕು ಮತ್ತು ಪಡಿತರ ವಿತರಣೆಯಲ್ಲಿ ದಿನೋಪಯೋಗಿ ವಸ್ತುಗಳಾಗಿ ಸೋಪ್ಪು, ತೊಗರಿಬೆಳೆ, ಕಡ್ಲೆ ಬೀಜ, ಮೊಟ್ಟೆ, ಗೋಧಿಹಿಟ್ಟು ನೀಡಬೇಕು ಹಾಗೆಯೇ ಬಿಪಿಎಲ್‌ ಗ್ಯಾಸ್‌ ಅನ್ನು ₹500 ನೀಡಬೇಕು. ನಗರ ಭೂಮಿತಿ ಕಾಯಿದೆ ಜಾರಿಗೆ ತಂದು ನಗರ ಜನ ಸಂಖ್ಯೆ ಪ್ರಮಾಣದಲ್ಲಿ ಸ್ಲಂ ನಿವಾಸಿಗಳಿಗೆ ಭೂಮಿಯನ್ನು ಮೀಸಲಿಡುವ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ನಗರ ಪ್ರದೇಶಗಳಲ್ಲಿರುವ 68 ಲಕ್ಷಕ್ಕೂ ಮೇಲ್ಪಟ್ಟ ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿ ಕಲ್ಪಿಸಲು ಸರ್ಕಾರಿ ಭೂಮಿ ಮತ್ತು ಖಾಸಗಿ ಭೂಮಿಗಳನ್ನು ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ದೃಷ್ಟಿಯಲ್ಲಿ ವಸತಿ ನಿರ್ಮಿಸಿ ಕೊಡಲು ಈ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆ ಸಂಚಾಲಕಿ ರೇಣುಕಾ ಸರಡಗಿ, ಅಧ್ಯಕ್ಷ ಹನುಮಂತ ಶಹಾಪುರಕರ್, ಉಪಾಧ್ಯಕ್ಷೆ ಈರಮ್ಮ ಕೋಳೂರು, ಮಹ್ಮಮದೇವಿ ಅನ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT