ಸಂವಿಧಾನ ಸುಟ್ಟ ಕಿಡಿಗೇಡಿಗಳ ಬಂಧಕ್ಕೆ ಆಗ್ರಹ

7
ವಿವಿಧ ದಲಿತ ಸಂಘಟನೆಗಳಿಂದ ಶಹಾಪುರ–ಯಾದಗಿರಿ ರಾಜ್ಯ ಹೆದ್ದಾರಿ ತಡೆ

ಸಂವಿಧಾನ ಸುಟ್ಟ ಕಿಡಿಗೇಡಿಗಳ ಬಂಧಕ್ಕೆ ಆಗ್ರಹ

Published:
Updated:
Deccan Herald

ಯಾದಗಿರಿ: ದೆಹಲಿಯಲ್ಲಿ ಕಿಡಿಗೇಡಿಗಳು ಸಂವಿಧಾನ ಪುಸ್ತಕ ಸುಟ್ಟಿರುವುದನ್ನು ಖಂಡಿಸಿ ಸಮೀಪದ ನಾಯ್ಕಲ್ ಕ್ರಾಸ್ ಬಳಿ ವಿವಿಧ ದಲಿತ ಸಂಘಟನೆಗಳು ಶನಿವಾರ ಶಹಾಪುರ–ಯಾದಗಿರಿ ರಾಜ್ಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದವು.

ದಲಿತ ಸಂಘಟನೆ ನೂರಾರು ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಸುಟ್ಟು ಅವಮಾನ ಮಾಡಿದ್ದ ಕಿಡಿಗೇಡಿಗಳನ್ನು ಬಂಧಿಸಿ ಮರಣದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !