ನೇಮಕಾತಿಯಲ್ಲಿ ಅನ್ಯಾಯ: ಖಂಡನೆ

ಮಂಗಳವಾರ, ಏಪ್ರಿಲ್ 23, 2019
29 °C
ಎಂಜಿನಿಯರ್‌ ಹುದ್ದೆಗಳ ಮರು ನೇಮಕಾತಿಗೆ ಆಗ್ರಹ

ನೇಮಕಾತಿಯಲ್ಲಿ ಅನ್ಯಾಯ: ಖಂಡನೆ

Published:
Updated:
Prajavani

ಯಾದಗಿರಿ: ಲೋಕೋಪಯೋಗಿ ಇಲಾಖೆಯ 800 ಎಂಜಿನಿಯರ್ ಹುದ್ದೆ ನೇಮಕಾತಿಯಲ್ಲಿ 371ಜೆ ಮೀಸಲಾತಿ ಅನುಷ್ಠಾನಗೊಳಿಸದೇ ಈ ಭಾಗದ ಪದವೀಧರರಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

ಲೋಕೋಪಯೋಗಿ ಇಲಾಖೆ ಸಚಿವ ಎಸ್‌.ಡಿ.ರೇವಣ್ಣ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಕೂಡಲೇ ಎಂಜಿನಿಯರ್‌ ನೇಮಕಾತಿ ರದ್ದುಪಡಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಗ್ರಹಿಸಿದರು.

ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ಸಂವಿಧಾನಾತ್ಮಕವಾಗಿ ನೀಡಲಾಗಿರುವ ಹಕ್ಕನ್ನು ರಾಜ್ಯ ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಹಿಂದುಳಿದ ಪ್ರದೇಶದಲ್ಲಿನ ಪದವೀಧರ ನಿರುದ್ಯೋಗಿಗಳು ಮೀಸಲಾತಿಯಿಂದ ವಂತಚಿತರಾಗುವಂತಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ, ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಪ್ರೊ.ಸಿ.ಎಂ. ಪಟ್ಟೇದಾರ, ಎನ್.ವಿ. ವಾರದ, ಸಂಗು ಬಿದರಿ, ನರೇಂದ್ರ ಅನವಾರ, ರವಿಕುಮಾರ ದೇವರಮನಿ, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶೇಖರಪ್ಪ ಅರ್ಜುಣಗಿ, ಬುಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲೇಶ ವಿಭೂತಿ, ಚಂದ್ರಪ್ಪ ಗಾಣಿಗಿ, ಶಂಕರ ಸೋನಾರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !