ಗುರುವಾರ , ಡಿಸೆಂಬರ್ 8, 2022
18 °C

ಕಾಲುವೆ ಒತ್ತುವರಿ ತೆರವುಗೊಳಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ತಾಲ್ಲೂಕಿನ ಬೊಮ್ಮನಳ್ಳಿ ಲಿಂಗದಳ್ಳಿ ವಿತರಣಾ ಕಾಲುವೆ ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಹಸನಾಪುರದ ಕೆಬಿಜೆಎನ್‍ಎಲ್ ಎಇಇ ಅವರಿಗೆ  ಮನವಿ ಸಲ್ಲಿಸಿದರು.

ಸೇನೆಯ ಅಧ್ಯಕ್ಷ ಮಲ್ಲಪ್ಪನಾಯಕ ಕಬಾಡಗೇರಾ ಮಾತನಾಡಿ, ಟಿ. ಬೊಮ್ಮನಳ್ಳಿಯಿಂದ ಸಿದ್ದಾಪುರ ಗ್ರಾಮದ ಮುಖಾಂತರ ರಂಗಂಪೇಟೆ ಕೆಇಬಿ ಹಿಂದುಗಡೆ ಹಸನಾಪುರ ಕ್ಯಾಂಪ್ ಮುಖಾಂತರ ವಣಕಿಹಾಳ ಮಾರ್ಗವಾಗಿ ಲಿಂಗದಳ್ಳಿಯ ಜಮೀನುಗಳಿಗೆ ಸಾಗುವ ವಿತರಣಾ ಕಾಲುವೆ ಸಂಖ್ಯೆ 12ನ್ನು ಅಲ್ಲಲ್ಲಿ ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಒತ್ತುವರಿ ಮಾಡಿಕೊಂಡ ಜಾಗದಲ್ಲಿ ನಿವೇಶನ ಮಾಡಿಕೊಂಡು, ರಸ್ತೆ ನಿರ್ಮಿಸಿದ್ದಾರೆ. ಮುಂದೆ ಬರುವ 10 ಹಳ್ಳಿಯ ಗ್ರಾಮಗಳ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಒತ್ತುವರಿ ತೆರವುಗೊಳಿಸಬೇಕು. ಕಾಲುವೆ ಕೊನೆವರೆಗೂ ನೀರು ಹರಿಯುವ ವ್ಯವಸ್ಥೆ ಮಾಡಬೇಕು. ವಿಳಂಬ ಮಾಡಿದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಶರಣು ಭೈರಿಮರಡಿ, ಹೊನ್ನಪ್ಪ ಭೈರಿಮರಡಿ, ರಾಘು ಗೋಗಿಕೇರಾ, ರಾಘು ಕಟ್ಟಿಮನಿ, ರವಿನಾಯಕ ಬಿಚ್ಚಗತ್ತಕೇರಿ, ತಿಪ್ಪಣ್ಣ ಖಾನಿಕೇರಿ, ಶಿವರಾಜ ವಗ್ಗರ, ರಾಮಚಂದ್ರ ಕಟ್ಟಿಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.