ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಮುಚ್ಚಿಡಲು ಕೇಂದ್ರ ಹುನ್ನಾರ; ಸಿಎಎ ವಿರೋಧಿಸಿ ಸಾಂಕೇತಿಕ ಧರಣಿ

Last Updated 22 ಜನವರಿ 2020, 10:55 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರ ದೇಶದ ಜ್ವಲಂತ ಸಮಸ್ಯೆಗಳನ್ನು ಮುಚ್ಚಿಡಲು ಸಿಎಎ, ಎನ್‌ಆರ್‌ಸಿ ಎನ್ಆರ್‌ಪಿ ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.

ದಸಂಸ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ವಿನಾಕಾರಣ ಇಲ್ಲದ ಕಾನೂನುಗಳನ್ನು ರಚಿಸುವ ಮೂಲಕ ದೇಶದಲ್ಲಿ ಜನರಿಗೆ ಬೇಕಾದ ಕೆಲಸಗಳನ್ನು ಮಾಡುವುದು ಬಿಟ್ಟು ಅನ್ಯ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಎನ್‌ಆರ್‌ಸಿ ಕಾಯ್ದೆ ಜಾರಿಗೆ ಬಂದರೆ ದೇಶದ ಬಹುತೇಕ ಜನರಲ್ಲಿ ದಾಖಲೆಗಳೇ ಇಲ್ಲ. ಇವರು ಅದು ಹೇಗೆ ದಾಖಲೆ ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಈ ಎಲ್ಲ ಕಾಯ್ದೆಗಳಿಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈ ಕಾಯ್ದೆಗಳನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಧರಣಿಯ ನೇತೃತ್ವ ವಹಿಸಿದ್ದರು. ಚಂದಪ್ಪ ಮುನಿಯಪ್ಪನೋರ, ಶಿವಕುಮಾರ ತಳವಾರ, ಶಿವಲಿಂಗ ಹಸನಾಪುರ, ಅಮರೇಶ ಶೆಳ್ಳಗಿ, ಹಣಮಂತಪ್ಪ ರೋಜಾ, ಮಲ್ಲಿಕಾರ್ಜುನ ಹುರಸಗುಂಡಗಿ, ಚಂದ್ರಶೇಖರ ಮುಕ್ತಾಪುರ, ಸುಭಾಷ ಹುರಸಗುಂಡಗಿ, ಸಂದೀಪ ಹೊಸಮನಿ, ಲಕ್ಷ್ಮಣ ರಸ್ತಾಪುರ, ಬಾಲರಾಜ ಖಾನಾಪುರ, ನಾಗರಾಜ ಹುರಸಗುಂಡಗಿ, ಸಂತೋಷ ಗುಂಡಳ್ಳಿ, ಮಲ್ಲಪ್ಪ ಹಾಲಭಾವಿ, ಅಮರೇಶ ದಿಗ್ಗಿ, ಶರಣಪ್ಪ ಕೋಟಿ, ಭೀಮರಾಯ ಜುನ್ನಾ, ಶರಬಣ್ಣ ರಸ್ತಾಪುರ, ಸುರಪುರದ ವೀರಭದ್ರಪ್ಪ ದೊಡ್ಡಮನಿ ತಳವಾರಗೇರಾ, ಶೇಖರ ಬಡಿಗೇರ, ಗೌತಮ ಬಡಿಗೇರ, ಆಕಾಶ ಕಟ್ಟಿಮನಿ, ವೆಂಕಟೇಶ ದೇವಾಪುರ, ತಾಯಪ್ಪ ಭಂಡಾರಿ, ವಡಗೇರಾ ಮಲ್ಲಪ್ಪ ಪೂಜಾರಿ, ಬಸಪ್ಪ, ಶರಣಪ್ಪ ಮಳ್ಳಳ್ಳಿ, ಹಣಮಂತ ಗುಂಡಳ್ಳಿ, ಚನ್ನಬಸವ, ಹುಣಸಗಿ ಇದ್ದರು.

ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ‌ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT