ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸುಳ್ಳು ಜಾತಿ ಪ್ರಮಾಣಪತ್ರ ತಡೆಗೆ ಮನವಿ

Last Updated 12 ಜನವರಿ 2022, 5:53 IST
ಅಕ್ಷರ ಗಾತ್ರ

ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಲವು ಜಾತಿಯ ಜನಾಂಗದವರು ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಂದು ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಆರೋಪಿಸಿ, ದಲಿತ ಮತ್ತು ಸಾಮೂಹಿಕ ಸಂಘಟನೆಗಳ ಒಕ್ಕೂಟದವರು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಒಕ್ಕೂಟದ ಮುಖಂಡ ವೆಂಕೋಬ ದೊರೆ ಮಾತನಾಡಿ, ‘ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮೇಲ್ವರ್ಗ ಹಾಗೂ ಪರಿಶಿಷ್ಟ ಜಾತಿಯಲ್ಲದ ಕೆಲವು ಸಮುದಾಯದವರು ಸುಳ್ಳು ಮಾಹಿತಿ ನೀಡಿ ಎಸ್‌ಸಿ, ಎಸ್‌ಟಿ ಪ್ರಮಾಣ ಪಡೆಯುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ದೂರಿದರು.

ಸುಳ್ಳು ಜಾತಿ ಪ್ರಮಾಣಪತ್ರ ನೀಡು ತ್ತಿರುವ ಅಧಿಕಾರಿಗಳು ಹಾಗೂ ಪಡೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದುರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.

ಮುಖಂಡರಾದ ರಮೇಶ ದೊರೆ ಆಲ್ದಾಳ, ವೆಂಕಟೇಶ ಹೊಸ್ಮನಿ, ರಾಹುಲ್ ಹುಲಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಗೇರಿ, ದೇವೇಂದ್ರಪ್ಪ ಪತ್ತಾರ, ವೆಂಕಟೇಶ ಬೇಟೆಗಾರ, ಶಿವಲಿಂಗ ಹಸನಾಪುರ, ಮಾಳಪ್ಪ ಕಿರದಳ್ಳಿ, ರಮೇಶ ಅರಕೇರಿ, ಶಿವಶಂಕರ ಹೊಸ್ಮನಿ, ರವಿಚಂದ್ರ ದರಬಾರಿ, ವೀರಭದ್ರ ತಳವಾರಗೇರಾ, ಮಲ್ಲು ಮುಷ್ಠಳ್ಳಿ, ಮಲ್ಲು ಕೆಸಿಪಿ, ಚಂದಪ್ಪ ಪಂಚಮ, ನಾಗರಾಜ ಗೋಗಿಕೇರಾ, ಶೇಖರ ಮಂಗಳೂರು, ಶರಣು ತಳವರಗೇರಿ, ರಾಜೂ ಬಡಿಗೇರ್, ಸಿದ್ದರಾಮ್ ಹಾಲಬಾವಿ, ಹಣಮಂತ ರತ್ತಾಳ, ಭೀಮಣ್ಣ ಬೇವಿನಾಳ, ಶರಣು ಚಂದ್ಲಾಪುರ, ರಾಯಪ್ಪ ಕಟ್ಟಿಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT