ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ವಿಹಾರ, ಅಂಬೇಡ್ಕರ್‌ ಭವನ ನಿರ್ಮಿಸಿ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
Last Updated 7 ಜುಲೈ 2022, 4:17 IST
ಅಕ್ಷರ ಗಾತ್ರ

ಯಾದಗಿರಿ: ನಗರ ಹೊರವಲಯದ ಅಶೋಕ ನಗರದ ಸರ್ವೇ ನಂಬರ್ 29/1ರಲ್ಲಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕರ ಹೆಸರಿನಲ್ಲಿ ಕಸ ವಿಲೇವಾರಿ ಘಟಕಕ್ಕೆ ಮಂಜೂರಿಯಾದ ಎರಡು ಎಕರೆ ಭೂಮಿಯನ್ನು ರದ್ದುಪಡಿಸಿ ಬುದ್ಧ ವಿಹಾರ, ಅಂಬೇಡ್ಕರ್‌ ಭವನ ನಿರ್ಮಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ ಜಿಲ್ಲಾ ಶಾಖೆಗಳ ವತಿಯಿಂದ ಆಗ್ರಹಿಸಲಾಯಿತು.

ಯಾದಗಿರಿ ಜಿಲ್ಲೆಯಾಗಿ 11 ವರ್ಷಗಳು ಕಳೆದಿದೆ. ಆದರೆ, ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕಾಗಿ, ಕಾರ್ಮಿಕರ ವಸತಿಗಾಗಿ ಬೌದ್ಧರ ಸ್ಮಶಾನಕ್ಕಾಗಿ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲೆ ಘೋಷಣೆ ಯಾದಾಗಲಿಂದಲೂ ಜಿಲ್ಲಾಡಳಿತ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಮೊದಲಿದ್ದ ಜಿಲ್ಲಾಧಿಕಾರಿ ಆದೇಶ ಪ್ರಕಾರ ತಹಶೀಲ್ದಾರರು, ಉಪವಿಭಾಗಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿ ಪ್ರಯತ್ನದಿಂದ ಈಗಾಗಲೇ ಬುದ್ಧ ವಿಹಾರಕ್ಕಾಗಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭವನ, ಕಾರ್ಮಿಕರ ವಸತಿಗಾಗಿ ಭೂಮಿಯನ್ನು ಮಂಜೂರು ಮಾಡುವಂತೆ ಈಗಾಗಲೇ ಅಶೋಕ ನಗರದ ಸರ್ಕಾರಿ ಸರ್ವೇ ನಂಬರ್ 29/1ರಲ್ಲಿ ಸ್ಕೆಚ್ ತಯಾರಿಸಿ ಪಂಪನಾಮೆಯೊಂದಿಗೆ ಪ್ರಸ್ತಾವನೆ ಕಳಿಸಿದ್ದಾರೆ. ಆದ್ದರಿಂದ ಈಗಾಗಲೇ ಅಶೋಕ ನಗರದ ಸರ್ಕಾರಿ ಸರ್ವೇ ನಂಬರ್ 29/1ರಲ್ಲಿ ಬುದ್ಧ ವಿವಾರ ವಿಹಾರ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಸತಿ ಗೃಹಗಳಿಗಾಗಿ ಹಾಗೂ ಬೌದ್ಧರ ಸ್ಮಶಾನಕ್ಕಾಗಿ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಕುರುಕುಂದಿ, ಡಾ. ಮಲ್ಲಿಕಾರ್ಜುನ ಆಶನಾಳ, ಅಜೀಜ್‌ ಸಾಬ್ ಐಕೂರ್‌, ನಿಂಗಪ್ಪ ಕಟಗಿ ಶಹಾಪುರ, ಮಹಾದೇವಪ್ಪ ಬಿಜಾಸಪುರ, ಮರೆಪ್ಪ ಹಾಲಗೇರ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ನಾಟೇಕರ್, ಬಸವರಾಜ ಗೋನಾಳ, ಚಂದ್ರಕಾಂತ ಹಂಪಿನ್, ಪರಶುರಾಮ್ ಬೈಲುಕುಂಟಿ, ಹಣಮಂತ ನರಸಿಂಗಪೇಟೆ, ಹುಲುಗಪ್ಪ ಬೈಲುಕುಂಟಿ, ಭೀಮಪ್ಪ ಲಕ್ಷ್ಮೀಪುರ, ಮಲ್ಲಪ್ಪ ಬಡಿಗೇರ ಬಾದ್ಯಾಪುರ, ಖಾಜಾ ಹುಸೇನ್ ಗುಡಗುಂಟಿ, ಬಸವರಾಜ್ ದೊಡ್ಡಮನಿ, ಮಲ್ಲಪ್ಪ ಹುರಸುಲ್‌, ರಮೇಶ್ ಹುಂಡೇಕಲ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT