ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾಯಾತ್ರೆಗೆ ಅಡ್ಡಿ: ತಹಶೀಲ್ದಾರ್ ವಜಾಗೆ ಆಗ್ರಹ

ಶ್ರೀರಾಮ ಸೇನೆ ಪದಾಧಿಕಾರಿಗಳ ಪ್ರತಿಭಟನೆ
Last Updated 17 ಅಕ್ಟೋಬರ್ 2019, 12:43 IST
ಅಕ್ಷರ ಗಾತ್ರ

ಯಾದಗಿರಿ: ಚಿಕ್ಕಮಗಳೂರನಲ್ಲಿ ದತ್ತಮಾಲಾ ಅಭಿಯಾನದ ಶೋಭಾಯಾತ್ರೆ ದತ್ತಾತ್ರೇಯ ವಿಗ್ರಹದ ಮೆರವಣಿಗೆ ನಿಷೇಧಿಸಿ ಆದೇಶ ಹೊರಡಿಸಿದ ತಹಶೀಲ್ದಾರ್‌ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಪಾಟೀಲ ಮಾತನಾಡಿ, ‘ಅ 13 ರಂದು ಶ್ರೀರಾಮ ಸೇನೆ ಸಂಘಟನೆ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ಜರುಗಿತು. ಕಾರವಾರ ಜಿಲ್ಲಾ ದತ್ತನ ಭಕ್ತರು ಶಿಲೆಯ ವಿಗ್ರಹ ಕಳುಹಿಸಿದ್ದರು. ಆದರೆ, ಆ ಶಿಲೆಯ ಮೆರವಣಿಗೆಗೆ ಅನುಮತಿ ನೀಡದೇ ಧಾರ್ಮಿಕ ಭಾವನೆ ಕೆರಳಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಧಾರ್ಮಿಕ ವಿಷಯದಲ್ಲಿ ಕಾನೂನು ಬಾಹಿರವಾಗಿ ಹಸ್ತಕ್ಷೇಪ ಮಾಡಿದ್ದು ಖಂಡನಾರ್ಹ. 13 ವರ್ಷದಲ್ಲಿ ಹಲವು ರೀತಿಯ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವುದೇ ತೊಂದರೆ ಇಲ್ಲದಿರುವುದು ಈ ಬಾರಿ ನಿಷೇಧ ಹೇರಿದ್ದು ನಾಚಿಗೇಡಿನ ಸಂಗತಿ’ ಎಂದು ದೂರಿದರು.

‘ರಾಜಕೀಯ ಒತ್ತಡಕ್ಕೆ ಮಣಿದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕಿದ ಕ್ರಮ ಸರಿಯಲ್ಲ. ಹೀಗಾಗಿಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು. ತಹಶೀಲ್ದಾರ್‌ ಆದೇಶ ರದ್ದುಗೊಳಿಸಬೇಕು. ದತ್ತಾತ್ರೇಯ ಕಲ್ಲಿನ ವಿಗ್ರಹವನ್ನು ಮುಂದಿನ ದಿನಗಳಲ್ಲಿ ಅಡತಡೆ ಇಲ್ಲದೇ ಶೋಭಾಯಾತ್ರೆಗೆ ಉಪಯೋಗಿಸಲು ಆದೇಶಿಸಬೇಕು. ದತ್ತಪೀಠ ಶೀಘ್ರ ಹಿಂದೂಗಳಿಗೆ ಒಪ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ತಾಲ್ಲೂಕು ಅಧ್ಯಕ್ಷ ಸಂದೀಪ ಮಹೇಂದ್ರಕರ್, ಅಂಬ್ರೇಷ್ ತಡಿಬಿಡಿ, ಹಣಮಂತ್ರಾಯ ಪಾಟೀಲ, ಸುಭಾಷ ದೇವದುರ್ಗ, ದೇವಿಂದ್ರ ಮಸ್ಕನಳ್ಳಿ, ಶಿವಾನಂದ ಮುಂಡರಗಿ, ಮಲ್ಲಿಕಾರ್ಜುನ ವರ್ಕನಳ್ಳಿ, ಸಾಬಣ್ಣ ಮಸ್ಕನಳ್ಳಿ, ಅಂಜಪ್ಪ ಮಸ್ಕನಳ್ಳಿ, ಮುಖೇಶ ರಾಮಸಮುದ್ರ, ಸಾಬಯ್ಯ ರಾಮಸಮುದ್ರ, ಜಗದೀಶ ಪಾಟೀಲ ಲಿಂಗೇರಿ, ರಮೇಶ ಲಿಂಗೇರಿ, ಈರಣ್ಣ ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT