ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂಮಾಪಕರಿಗೆ ಸೇವಾ ಭದ್ರತೆ ಕಲ್ಪಿಸಿ’

ಸ್ವಾಮಿತ್ವ ಯೋಜನೆ: ಪರವಾನಗಿ ಭೂಮಾಪಕರನ್ನು ಕೈಬಿಡಲು ಮನವಿ
Last Updated 10 ಅಕ್ಟೋಬರ್ 2020, 3:34 IST
ಅಕ್ಷರ ಗಾತ್ರ

ಯಾದಗಿರಿ: ಸ್ವಾಮಿತ್ವ ಯೋಜನೆಯಿಂದ ಪರವಾನಗಿ ಭೂಮಾಪಕರನ್ನು ಕೈ ಬಿಡಬೇಕೆಂದು ಹೈದರಾಬಾದ್ (ಕಲ್ಯಾಣ) ಕರ್ನಾಟಕ ಪರವಾನಗಿ ಭೂಮಾಪಕರ ಸಂಘದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

ಭೂಮಾಪನ ಇಲಾಖೆಯಲ್ಲಿ 2000ರಿಂದ ಪರವಾನಗಿ ಭೂಮಾಪಕರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದೇವೆ. ಮೇಲಧಿಕಾರಿಗಳ ನಿರ್ದೇಶನದಂತೆ ಕೆಲಸಗಳನ್ನು ಮಾಡುತ್ತಲೇ ಬಂದಿದ್ದು, ನಮಗೆ ಸರ್ಕಾರದಿಂದ ಹಾಗೂ ಇಲಾಖೆಯಿಂದ ಯಾವುದೇ ಸೇವಾ ಭದ್ರತೆ ನೀಡಿಲ್ಲ. ಇದರ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗೆ ಹಲವು ಬಾರಿ ಮನವಿ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು
ದೂರಿದ್ದಾರೆ.

ಈ ಹಿಂದೆ ಪೋಡಿಮುಕ್ತ ಯೋಜನೆ ಅಭಿಯಾನದಲ್ಲಿಯೂ ಪರವಾನಗಿ ಭೂಮಾಪಕರು ದಾಖಲೆಗಳನ್ನು ತಯಾರಿಸಿ, ದುರಸ್ತಿಪಡಿಸಿ ಸಕಾಲದಲ್ಲಿ ಕಚೇರಿಗೆ ಸಲ್ಲಿಸಿದರೂ ಸುಮಾರು 4-5 ವರ್ಷದಿಂದ ಯಾವುದೇ ಸಂಭಾವನೆ ನೀಡಿಲ್ಲ
ಎಂದರು.

ಸರ್ವೆಯಲ್ಲಿ ತೊಡಗಿಸಿಕೊಳ್ಳಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರು ಆದೇಶ
ಮಾಡಿದ್ದಾರೆ.

ಈ ವೇಳೆ ಸಂಘದ ಶಾಂತಕುಮಾರ ಕಾವಲಿ, ಶ್ರೀಕಾಂತ ಎ.ನಿಂಬೂರ, ಕೆ.ಸಿ.ವಿಶ್ವನಾಥ, ರವೀಂದ್ರ ಹಡಪದ, ಪಿ.ಕೆ.ರೇವಣ್ಣ, ಪ್ರಭುಗೌಡ ಎಸ್.ಮಾಲಿ ಪಾಟೀಲ, ಅನಿಲಕುಮಾರ ಎಸ್.ರಸ್ತಾಪುರ, ಶರಣಪ್ಪ ಮೇಟಿ, ಅಯ್ಯಣ್ಣ, ರಾಮಸಿಂಗ್ ರಜಪೂತ, ಗೋಪಾಲಕೃಷ್ಣ, ಖತಾಲಹುಸೇನ್, ಮಹ್ಮದ್ ರಫಿಕ್, ನಾಗರಾಜ, ವೆಂಕಟೇಶ ಬಿ., ಬಸವಲಿಂಗಪ್ಪ, ಬಂಡೆಪ್ಪ ಕರಿಬಾವಿ, ಮರೆಪ್ಪ ಅಗಸರ, ಮಹೇಶ ಪಾಸೊಳ್ಳಿ ಸೇರಿದಂತೆ ಸಂಘದ ಸದಸ್ಯರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT