ಶಹಾಪುರ: ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಪೂರೈಸಿದ್ದ ನಂದಿನಿ ಹಾಲಿನ ಪುಡಿ ಅಕ್ರಮವಾಗಿ ಸಾಗಿಸಿದ ಆರೋಪ ಸಾಬೀತಾದ ಕಾರಣ ನಗರದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದರಾಮ ಟಿ.ಪಿ ಅವರು ಅಗತ್ಯ ವಸ್ತುಗಳ ಕಾಯ್ದೆ ಅಡಿ ಅಪರಾಧಿ, ಉಕ್ಕಿನಾಳ ಗ್ರಾಮದ ಮಶಾಕ ಗುಡುಸಾಬ್ ನದಾಫ್ಗೆ ₹5 ಸಾವಿರ ದಂಡ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ.

2022ರ ಜುಲೈ 17ರಂದು ಮಶಾಕ ತನ್ನ ಕಾರಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ನಂದಿನಿ ಹಾಲಿನ ಪುಡಿಯ 60 ಪಾಕೇಟ್ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ, ಆಗ ಭೀಮರಾಯನಗುಡಿ ಪೊಲೀಸರು ದಾಳಿ ಮಾಡಿ ಹಾಲಿನ ಪುಡಿಯ ಪಾಕೇಟ್ ಹಾಗೂ ಕಾರು ಜಪ್ತಿ ಮಾಡಿದ್ದರು.

ಶಹಾಪುರದ ಅಂದಿನ ಸಿಡಿಪಿಒ ಗುರುರಾಜ ಭೋಗಶೆಟ್ಟಿ ಅವರು ತಾಲ್ಲೂಕಿನ ಮುಡಬೂಳ ಗ್ರಾಮದ ಇಬ್ಬರು ಅಂಗನಾಡಿ ಕಾರ್ಯಕರ್ತೆಯರು, ಹಾಲಿನ ಪುಡಿ ಖರೀದಿಸಿದ ವ್ಯಕ್ತಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದರು. ಭೀಮರಾಯನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಶಾಕಗೆ ಶಿಕ್ಷೆ ವಿಧಿಸಿ ಉಳಿದ ಮೂವರನ್ನು ಖುಲಾಸೆಗೊಳಿಸಲಾಗಿದೆ.

ಫಿರ್ಯಾದಿದಾರರ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ವೆಂಕೋಬ ದೇಸಾಯಿ ಕಕ್ಕೇರಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.