ಕೆಂಭಾವಿ: ಸಮೀಪದ ಬೈಚಬಾಳ–ಕೂಡಲಗಿ ಹಾಗೂ ಕರಡಕಲ್ ಗ್ರಾಮಗಳ 43 ರೈತರಿಗೆ ಭತ್ತ ಖರೀದಿ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಭಾಗಶಃ ನ್ಯಾಯ ದೊರೆತಿದ್ದು, ₹ 71 ಲಕ್ಷ ಹಣವನ್ನು ಮರುಪಾವತಿಸಲಾಗಿದೆ.

ಕಳೆದ ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ರೈತರು ಮುಂಗಾರು ಭತ್ತವನ್ನು ಬೆಳೆದು, ಉತ್ತಮ ಬೆಲೆ ನಿರೀಕ್ಷೆಯಲ್ಲಿ ಆಂಧ್ರ ಮೂಲದ ವ್ಯಕ್ತಿಗೆ ಸುಮಾರು ₹ 1.49 ಕೋಟಿ ಮೌಲ್ಯದ ಭತ್ತವನ್ನು ಮಾರಾಟ ಮಾಡಿದ್ದರು. ಆದರೆ, ವ್ಯಾಪಾರಿ ರೈತರಿಗೆ ಹಣ ನೀಡದೆ ಪರಾರಿಯಾಗಿದ್ದ ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ಈ ಹಿಂದೆ ಮಾಜಿ ಸಚಿವ ರಾಜೂಗೌಡ ಅವರು ರೈತರೊಂದಿಗೆ ಸೇರಿ ಕೆಂಭಾವಿ ಪೊಲೀಸ್ ಠಾಣೆಗೆ ತೆರಳಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ದೂರು ದಾಖಲಿಸಲು ನೆರವಾಗಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದರು.

ಇದಾದ ಬಳಿಕ ಸುಮಾರು ಐದಾರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ದಲ್ಲಾಳಿಯಿಂದ ₹ 71 ಲಕ್ಷ ಹಣವನ್ನು ವಸೂಲಿ ಮಾಡಿ, ಬೈಚಬಾಳ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಾಜುಗೌಡ ಅವರು ಸ್ವತಃ ರೈತರಿಗೆ ಹಣ ವಿತರಿಸಿದರು.

ಈ ವೇಳೆ ಯಲ್ಲಪ್ಪ ಕುರಕುಂದಿ, ಕೃಷ್ಣಾರೆಡ್ಡಿ ಮುದನೂರ, ಪ್ರವೀಣ ನಾಯಕ್, ನಿಂಗಣ್ಣ ಗೋಡಿಹಾಳ್ಕರ್, ಬಸವರಾಜ ನಾಯಕ್, ವೆಂಕನಗೌಡ ಪೊಲೀಸ್ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-30-1123644735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.