ಹುಣಸಗಿ: ತಾಲ್ಲೂಕಿನ ರಾಜನಕೊಳೂರು ಬಳಿಯ ಬೂದಿಹಾಳ-ಪೀರಾಪೂರ ಯೋಜನೆ ವಿಸ್ತರಣಾ ಕಾಮಗಾರಿಯನ್ನು ಶಾಸಕ ರಾಜಾ ವೇಣುಗೋಪಾಲನಾಯಕ ಶನಿವಾರ ಭೇಟಿ ಮಾಡಿ ಪರೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೆಬಿಜೆಎನ್ಎಲ್ ಎಸ್ಇ ರಮೇಶ ಚವ್ವಾಣ ಅವರು ಹಾಜರಿದ್ದು ತೂಬು ಸಂಖ್ಯೆ 193ರಲ್ಲಿನ ಮಾಹಿತಿ ನೀಡಿದರು.

ಕೃಷ್ಣಾ ಭಾಗ್ಯ ಜಲ ನಿಗಮ ನಾರಾಯಣಪುರ ವಲಯದ ಅಡಿಯಲ್ಲಿ ಕೈಗೊಳ್ಳಲಾಗಿರುವ ಈ ಕಾಮಗಾರಿಯು ಸದ್ಯ ಕಾಮಗಾರಿ ಪೂರ್ಣ ಮುಕ್ತಾಯ ಹಂತದಲ್ಲಿದೆ. ಆದರೆ ಹೊಲಗಾಲುವೆ ಕಾಮಗಾರಿ ಮಾತ್ರ ಬಾಕಿ ಇದೆ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಅವರ ಗಮನಕ್ಕೆ ತಂದರು.

ಆಗ ಶಾಸಕರು ಮಾತನಾಡಿ, ‘ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಕೂಡಲೇ ಕಾಲುವೆ ನಿರ್ಮಾಣಕ್ಕೆ ಅಗತ್ಯ ಅನುದಾನದ ಕುರಿತು ಬೇಡಿಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಹಾಗೂ ಶಹಾಪುರ ಮತಕ್ಷೇತ್ರದ ಜನತೆಯ ಬಹು ನೀರಿಕ್ಷಿತ ಕಾಮಗಾರಿ ಇದಾಗಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಹುಣಸಗಿ ತಾಲ್ಲೂಕಿನ ತೀರ್ಥ, ಮಾರಲಭಾವಿ, ಕೊಳಿಹಾಳ, ಮಾಳನೂರ, ಕೋಡೆಕಲ್ಲ, ಬೂದಿಹಾಳ, ಹಗರಟಗಿ, ಎಣ್ಣಿವಡಗೇರಿ, ಕರಿಬಾವಿ ಸೇರಿದಂತೆ ಇತರ ಗ್ರಾಮಗಳ ಜಮೀನುಗಳಿಗೆ ಈ ಯೋಜನೆಯ ಲಾಭ ದೊರಕಲಿದೆ. 33 ಹಳ್ಳಿಗಳ ಅಂದಾಜು 44 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಹರಿಸುವ ಕಲ್ಪಿಸುವ ಬೃಹತ್ ಯೋಜನೆಯಾಗಿದೆ. ಜನೇವರಿ 2023ಕ್ಕೆ ಈ ಯೋಜನೆ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸಬೇಕಿತ್ತು ಎಂದರು. ನಾರಾಯಣಪುರ ವಿಭಾಗದ ಇಇ ಎಚ್.ಬಿ.ಕೊಣ್ಣೂರು, ಸಿಪಿಐ ರವಿಕುಮಾರ, ಎಇಇ ರಾಘವೇಂದ್ರ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯ ಸೇರಿದಂತೆ ಮುಖಂಡರಾದ ವೆಂಕೋಬ ಯಾದವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಗುಂಡಪ್ಪ ಸೊಲ್ಲಾಪೂರ, ಅಬ್ದುಲ್ ಗಫಾರ ನಗನೂರಿ, ಗೋಪಾಲ ದೊರಿ, ಸೂಗೂರೇಶ ವಾರದ, ಶಂಕರ ಚವ್ವಾಣ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-2136488220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.