ಕಕ್ಕೇರಾ: ‘ಪಟ್ಟಣದಲ್ಲಿ ಪ್ರಮುಖ ರಸ್ತೆಯ ಅಕ್ಕಪಕ್ಕ ಹಾಗೂ ನಾಡ ಕಚೇರಿಗೆ ವಾಹನ ಮತ್ತು ನಾಗರಿಕರು ಸಂಚರಿಸಲು ಬಾರದಂತೆ 50ಕ್ಕೂ ಹೆಚ್ಚು ಅನಧಿಕೃತವಾಗಿ ನಿರ್ಮಿಸಲಾಗಿರುವ ಡಬ್ಬಾ ಅಂಗಡಿಗಳನ್ನು ಕೂಡಲೇ ಪುರಸಭೆ ಆಡಳಿತ ಮಂಡಳಿ ತೆರವುಗೊಳಿಸಬೇಕು’ ಎಂದು ಸದಸ್ಯರು ಮುಖ್ಯಾಧಿಕಾರಿಗೆ ಆಗ್ರಹಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಪರಮಣ್ಣ ಕಮತಗಿ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಪ್ರಮುಖ ರಸ್ತೆ ಬದಿಗಳಲ್ಲಿ ಮತ್ತು ವಾಣಿಜ್ಯ ಸಂಕೀರ್ಣದ ಪಕ್ಕದಲ್ಲಿ ಇಟ್ಟಿರುವ ಡಬ್ಬಾ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಿದರೆ ಮುಕ್ತವಾಗಿ ಸಂಚರಿಸಲು ಅನುಕೂಲವಾಗುತ್ತದೆ ಎಂದು ಸಮಸ್ಯೆಯನ್ನು ಪುರಸಭೆ ಸದಸ್ಯರು ಮನವರಿಕೆ ಮಾಡಿದರು.

‘ಸರ್ಕಾರದಿಂದ ಕಡಿಮೆ ಅನುದಾನ ಬರುತ್ತಿರುವುದರಿಂದ ನಮ್ಮ ವಾರ್ಡ್ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಪೌರಕಾರ್ಮಿಕರಿಗೆ ಕೂಡಲೇ ವೇತನ ಬಿಡುಗಡೆ ಮಾಡಬೇಕು. ಮುಂದಿನ ಸಾಮಾನ್ಯ ಸಭೆಗೆ ಶಾಸಕರನ್ನು ಕರೆಸಿ ಹೆಚ್ಚಿನ ಅನುದಾನಕಕ್ಕೆ ಕೋರಬೇಕು’ ಎಂದು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.

‘ಸಮುದಾಯ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿ ತ್ವರಿವಾಗಿ ಮುಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ. ಹೆರಿಗೆಯಾದ ಮಹಿಳೆಯರಿಗೆ ಉಪಾಹಾರ, ಊಟ ನೀಡುತ್ತಿಲ್ಲ’ ಎಂದು ಸಭೆಯಲ್ಲಿದ್ದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಖರ್ಚು ವೆಚ್ಚಗಳಿಗೆ ಅನುಮೋದನೆ, 16ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ, ಎಸ್ಎಫ್ಸಿ ಅನುದಾನದ ಕ್ರಿಯಾ ಯೋಜನೆ, ಹೊರಗುತ್ತಿಗೆಯ ಲೋಡರ್ಸ್ ಮತ್ತು ಇನ್ನಿತರ ಸಿಬ್ಬಂದಿ ಅವಧಿ ಮುಕ್ತಾಯ, ಪುರಸಭೆ ಕಾರ್ಯಾಲಯ ನೂತನ ಕಟ್ಟಡ ನಿರ್ಮಾಣ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.

ಅಲ್ಲದೇ, ಪುರಸಭೆ ವ್ಯಾಪ್ತಿಗೆ ಬರುವ ರಸ್ತೆಗಳ ವಿಸ್ತರಣೆಗಾಗಿ ಪ್ರಸ್ತಾವನೆ, ಬಸವೇಶ್ವರ ವೃತ್ತಕ್ಕೆ 50X50 ಜಾಗ, ಪುರಸಭೆಗೆ ಕಾನೂನು ಸಲಹೆಗಾರರ ನೇಮಕ, ಸೋಮನಾಥ, ಯಲ್ಲಮ್ಮನ ಕೆರೆ ಸರ್ವೆ, ಪುರಸಭೆ ವ್ಯಾಪ್ತಿಯ ಸರ್ಕಾರಿ ಗ್ರಾಮಠಾಣಾ ಮತ್ತು ಗೈರಾಣು ಭೂಮಿ ಸರ್ವೆ, ಅಮೃತ್–2.0 ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿ ಹಾಗೂ 22 ಮತ್ತು 23 ವಾರ್ಡ್ಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸುವ ಕುರಿತು ಚರ್ಚೆ ನಡೆಸಲಾಯಿತು.

ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್, ಸಿಬ್ಬಂದಿಗಳಾದ ಮಾನಪ್ಪ ಗೋನಾಲ್, ಶೇಖರ್, ಮೌನೇಶ ನಾಯಕ, ಜಟ್ಟೆಪ್ಪ ಬಾಚಾಳ್, ಕೃಷ್ಣಾನಾಯ್ಕ್ ರಾಠೋಡ, ಪುರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸೇರಿ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-30-1791704559

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.