ಬಿಸಿಲಿನಿಂದ ಆರೋಗ್ಯ ಸಮಸ್ಯೆಗಳು
‘ಉರಿ ಬಿಸಿಲಿನಿಂದಾಗಿ ಜನಸಾಮಾನ್ಯರಲ್ಲಿ ನಿರ್ಜಲೀಕರಣ, ತಲೆನೋವು, ಸುಸ್ತು, ವಾಂತಿ, ಮತ್ತು ವಯೋವೃದ್ಧರ ಆರೋಗ್ಯದಲ್ಲಿ, ಮಕ್ಕಳಿಗೆ ಜ್ವರದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಹೆಚ್ಚು ಹೆಚ್ಚು ನೀರು, ಮಜ್ಜಿಗೆ, ಎಳನೀರು, ನಿಂಬೆರಸ ಕುಡಿಯಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ಛತ್ರಿ, ಟೋಪಿ ಬಳಸಬೇಕು. ಕಾರ್ಮಿಕರು ಬೆಳಿಗ್ಗೆ 7 ರಿಂದ 11 ರೊಳಗೆ ಹೊರಗಿನ ಕೆಲಸಗಳನ್ನು ಮುಗಿಸಿಕೊಳ್ಳಬೇಕು. ಸಡಿಲ ಬಟ್ಟೆಗಳನ್ನು ಧರಿಸಿ, ನೈಸರ್ಗಿಕ ಪಾನೀಯಗಳನ್ನು ಸೇವಿಸಿ. ಮಧ್ಯಾಹ್ನ ಸಮಯದಲ್ಲಿ ಅನಾವಶ್ಯಕವಾಗಿ ಜನರು ಸುಡು ಬಿಸಿಲಿನಲ್ಲಿ ತಿರುಗಾಡಬಾರದು’ ಎಂದು ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿ ಡಾ.ಪ್ರಮೋದ ಕುಲಕರ್ಣಿ ಸಾರ್ವಜನಿಕರಿಗೆ ಸಲಹೆ ನೀಡಿದರು.