ವಡಗೇರಾ: ‘ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಕೆಲಸದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಲಾಗಿದೆ’ ಎಂದು ವಡಗೇರಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಹೀರೆಮಠ ಹೇಳಿದರು

ತಾಲ್ಲೂಕಿನ ಬಿಳ್ಹಾರ ಗ್ರಾಮದ ಹೋರವಲದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಹಳ್ಳದ ನಾಲ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

‘ಕೆಲಸದ ಅವಧಿಯಲ್ಲಿ ಬಾಯಾರಿಕೆ ಆಗದಿದ್ದರು ಆಗಾಗ ನೀರು ಕುಡಿಯಬೇಕು. ಬಿಸಿಲಿನ ಪ್ರಖರತೆ ಹೆಚ್ಚಾದಾಗ ವಿಶ್ರಾಂತಿ ಮಾಡಿ ಪುನಃ ಕೆಲಸ ಮಾಡಿ’ ಎಂದರು.

‘ನರೇಗಾದಲ್ಲಿ ಕ್ರೀಯಾ ಯೋಜನೆ ರೂಪಿಸಿ ನರೇಗಾ ಕಾರ್ಮಿಕರಿಂದರಿಂದ ಹಳ್ಳದ ನಾಲ ಹೂಳೆತ್ತುವ ಮೂಲಕ ನೀರಿನ ಅಂತರ್ಜಲ ಶಕ್ತಿ ಹೆಚ್ಚಿಸುವುದರ ಜತೆಗೆ, ನರೇಗಾ ಕಾರ್ಮಿಕರಿಗೆ ನಿರಂತರ ಉದ್ಯೋಗ ಖಾತ್ರಿ ಕೆಲಸ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಮಳೆಗಾಲದಲ್ಲಿ ಹಳ್ಳದ ನಾಲ ನೀರು ಅಕ್ಕ-ಪಕ್ಕದ ಜಮೀನಿಗಳಿಗೆ ನುಗ್ಗಿ ರೈತರ ಬೆಳೆ ಹಾನಿಯಾಗುತ್ತವೆ. ಇದನ್ನು ತಪ್ಪಿಸಲು ಹಳ್ಳದಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು

‘ಬೇಸಿಗೆಯ ಈ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಗೂಳೆ ಹೋಗದೆ ಇದ್ದ ಊರಲ್ಲೆ ಮನರೇಗಾ ಕೆಲಸ ಮಾಡಿ ಕುಟುಂಬದ ಜತೆ ನೆಮ್ಮದಿಯ ಜೀವನವನ್ನು ನಡೆಸಬೇಕು. ಕೆಲಸದ ಸ್ಥಳದಲ್ಲಿ ಕಾರ್ಮಿಕರು ಎನ್ಎಂಎಂಎಸ್ ಆನ್ಲೈನ್ ಹಾಜರಾತಿ ದಿನದಲ್ಲಿ ಎರಡು ಬಾರಿ ಹಾಕಬೇಕು’ ಎಂದರು.

ನಂತರ ಬಿಳ್ಹಾರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆ ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತ್ವರಿತವಾಗಿ ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ತಿಳಿಸಿದರು.

ಟಿಸಿ ರವೀಂದ್ರ ದೇಸಾಯಿ, ಟಿಐಸಿ ದುರ್ಗೇಶ, ಲೆಕ್ಕಸಹಾಯಕ ಶರಣಬಸವ, ಟಿಎಇ ಮಂಜುನಾಥ ಸೇರಿದಂತೆ ಕೂಲಿ ಕಾರ್ಮಿಕರು ಹಾಗೂ ಇನ್ನಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-30-1119828239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.