ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿ ಜಿಟಿ ಮಳೆದ ಕುಸಿದ ಮನೆ

ನಾಯ್ಕಲ್‍ನಲ್ಲಿ ಮನೆ ಕುಸಿದು ತಂದೆ, ತಾಯಿ,ಮಕ್ಕಳು ಪ್ರಾಣಾಪಾಯದಿಂದ ಪಾರು
Last Updated 20 ಸೆಪ್ಟೆಂಬರ್ 2019, 5:59 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಜಿಟಿ ಜಿಟಿ ಮಳೆಯಾಗಿದ್ದು, ಈ ಮಳೆಗೆ ನಗರ ಹೊರವಲಯದ ನಾಯ್ಕಲ್ ಗ್ರಾಮದ ಶೆನ್ನು ಬೇಗಂ ಸಲೀಂ ಬಾರಪೇಟೆ ಎಂಬುವವರ ಮನೆ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದೆ.

ಮನೆಯಲ್ಲಿರುವ ಪತ್ನಿ ಶೆನ್ನು ಬೇಗಂ, ಪತಿ ಸಲೀಂ ಬಾರಪೇಟೆ, ಮಕ್ಕಳಾದ ಇಮಾಮಸಾಬ್, ಅಮ್ಮು, ಕಾಸಿಂ, ಅಶ್ಪಕ್, ಅನ್ನು ಬೇಗಂಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆಯಲ್ಲಿರುವ ದವಸ ಧಾನ್ಯಗಳು, ಬಟ್ಟೆ ಬರೆ, ಸಾಮಗ್ರಿಗಳು, ಜೋಳ, ಅಕ್ಕಿ, ಮನೆಯ ಸಾಮಾನು, ಟಿವಿ ಇತರೆ ವಸ್ತುಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ಹಾಳಾಗಿವೆ.

ಮೊಹರಂ ಹಬ್ಬಕ್ಕೆ ಬೆಂಗಳೂರಿನಿಂದ ಕಳೆದ ವಾರ ಗ್ರಾಮಕ್ಕೆ ಬಂದಿದ್ದರು. ಹೊಟ್ಟೆಪಾಡಿಗಾಗಿ ಮತ್ತೆ ಬೆಂಗಳೂರಿಗೆ ಹೋಗುವವರಿದ್ದರು. ಅಷ್ಟರೊಳಗೆ ಮಳೆಗೆ ಮನೆ ಕುಸಿದಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಾಜಾಸಾಬ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT