ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ

Last Updated 6 ಜುಲೈ 2022, 16:30 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಜಿಟಿಜಿಟಿ ಮಳೆಯಾಗಿದೆ.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಆಗಾಗ ಜಿಟಿಜಿಟಿ ಮಳೆಯಾಯಿತು. ಜಿಟಿಜಿಟಿ ಮಳೆಯಿಂದ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಗಳ ವ್ಯಾಪಾರಿಗಳು ತಾಡಪತ್ರಿ ಕಟ್ಟಿಕೊಂಡು ವಹಿವಾಟು ನಡೆಸಿದರು. ಅಲ್ಲಲ್ಲಿ ಕೊಡೆ ಹಿಡಿದು ಸಂಚಾರ ಮಾಡುವುದು ಕಂಡು ಬಂತು. ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಶಹಾಪುರದಲ್ಲಿ ಮಧ್ಯಾಹ್ನದಿಂದ ಜಿಟಿ ಜಿಟಿ ಮಳೆಯಾಗಿದೆ. ಗುರುಮಠಕಲ್, ಸೈದಾಪುರ, ಹುಣಸಗಿ, ಕಕ್ಕೇರಾ, ಕೆಂಭಾವಿ, ಯರಗೋಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಿಟಿಜಿಟಿ ಮಳೆಯಾಗಿದೆ.

ಯರಗೋಳ ವರದಿ: ಸುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ತಗ್ಗು, ರಸ್ತೆ, ಚರಂಡಿಗಳಲ್ಲಿ ನೀರು ಹರಿದಾಡಿತು.

ಅಲ್ಲಿಪುರ, ಮಲಪ್ಪನಹಳ್ಳಿ, ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಕಾನ್ನಳ್ಳಿ, ಬಸವಂತಪುರ, ಹೆಡಗಿಮದ್ರಾ, ಮುದ್ನಾಳ, ಠಾಣಗುಂದಿ, ಕಂಚಗಾರಹಳ್ಳಿ, ಚಾಮನಹಳ್ಳಿ, ಹೋರುಂಚಾ, ಅರಿಕೇರಾ (ಬಿ), ಬೊಮ್ಮಚಟ್ಟನಹಳ್ಳಿ, ಯಡ್ಡಳ್ಳಿ, ಬಂದಳ್ಳಿ, ಬಾಚವಾರ, ಹತ್ತಿಕುಣಿ, ಚಾಮನಾಳ, ಹೊನಗೇರಾ, ಬೆಳಗೇರಾ, ಮೋಟ್ನನಹಳ್ಳಿ ಗ್ರಾಮಗಳಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT