ಭಾನುವಾರ, ಆಗಸ್ಟ್ 25, 2019
21 °C

ರಾತ್ರಿ ಇಡೀ ಸುರಿದ ಜಿಟಿ ಜಿಟಿ ಮಳೆ

Published:
Updated:
Prajavani

ಯಾದಗಿರಿ: ಕಳೆದ ಒಂದು ವಾರದಿಂದ ಸಂಜೆ ಸುರಿಯುತ್ತಿದ್ದ ಮಳೆ ಶುಕ್ರವಾರ ರಾತ್ರಿ ಪೂರ್ತಿ ಜಿಟಿ ಜಿಟಿ ಸುರಿಯಿತು. ಶನಿವಾರ ಬೆಳಿಗ್ಗೆಯೂ ಮಳೆ ಮುಂದುವರಿದಿದ್ದರಿಂದ ಮಳೆಯಲ್ಲಿಯೇ ಮಕ್ಕಳು ಕೊಡೆ ಹಿಡಿದು ಶಾಲೆಗೆ ತೆರಳುತ್ತಿರುವುದು ಕಂಡು ಬಂತು.

ಮಳೆಗೆ ನಗರದ ಸ್ಟೇಷನ್‌ ರಸ್ತೆ, ಮಾರ್ಕೆಟ್‌ ರಸ್ತೆಗಳೆಲ್ಲ ಕೆಸರು ಗದ್ದೆಯಂತಾಗಿವೆ. ಆಟೋ, ಬೈಕ್‌ ಸವಾರರು ಕೆಸರಲ್ಲೇ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು.

ಮುಂಗಾರು ಆರಂಭವಾದ ದಿನದಿಂದ ನಗರದಲ್ಲಿ ಇಷ್ಟೊಂದು ಸತತ ಮಳೆ ಸುರಿದಿರಲಿಲ್ಲ. ಇದರಿಂದ ನಗರದ ಹಲವು ಕಡೆ ರಸ್ತೆಯಲ್ಲಿ ಗುಂಡಿ ಬಿದ್ದು, ಸಂಚಾರಕ್ಕೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸಿಸಿ ರಸ್ತೆಯಲ್ಲಿ ನೀರು ನಿಂತು ಗುಂಡಿಗಳು ಕಾಣದಂತೆ ಆಗಿವೆ. ನಗರಸಭೆ ಅಧಿಕಾರಿಗಳು ಶೀಘ್ರ ರಸ್ತೆ ಗುಂಡಿ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

Post Comments (+)