ಆಂಜನೇಯಸ್ವಾಮಿ ರಥೋತ್ಸವ ಅದ್ಧೂರಿ

7
ಬದ್ದೇಪಲ್ಲಿ: ಕಣ್ಮನ ಸೆಳೆದ ಬಾಜ ಭಜಂತ್ರಿ, ಡೊಳ್ಳು ಕುಣಿತ

ಆಂಜನೇಯಸ್ವಾಮಿ ರಥೋತ್ಸವ ಅದ್ಧೂರಿ

Published:
Updated:
Deccan Herald

ಯಾದಗಿರಿ: ತಾಲ್ಲೂಕಿನ ಗಡಿಭಾಗದ ಬದ್ದೇಪಲ್ಲಿ ಗ್ರಾಮದಲ್ಲಿ ಭಾನುವಾರ ಆಂಜನೇಯ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಮುಂಜಾನೆ ಕುಂಬವನ್ನು ಹೊತ್ತು ತಂದ ಭಕ್ತರು ರಥಕ್ಕೆ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಿದರು. ಮಂದಿರದಿಂದ ದೇವರನ್ನು ಪಲ್ಲಕ್ಕಿಯಲ್ಲಿ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ನಂತರ ದೇವರನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ರಥದ ಹಗ್ಗವನ್ನಿಡಿದ ಭಕ್ತರು ಜೈಘೋಷ ಹಾಕಿದರು. ಆಂಜನೇಯ ದೇವಸ್ಥಾನದಿಂದ ಹೊರಟ ರಥೋತ್ಸವ ದೇವರ ಪಾದಗಟ್ಟೆ ತಲುಪಿತು. ಪಾದಗಟ್ಟೆಯಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥವನ್ನು ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.

ದೇವರನ್ನು ಪಲ್ಲಕ್ಕಿಯ ಮೂಲಕ ಪುನಃ ಮಂದಿರದೊಪಳಗೆ ಕೊಂಡೊಯ್ಯಲಾಯಿತು. ಯುವ ಸಮೂಹವು ರಥೋತ್ಸವದ ಉದ್ಧಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿತು. ಬಾಜ ಭಜಂತ್ರಿಯ ಜತೆಗೆ ಡೊಳ್ಳು ಕುಣಿತ ಕಣ್ಮನ ಸೆಳೆಯಿತು. ಮಹಿಳೆಯರು ಆರತಿ ಬೆಳಗುವ ಜತೆಗೆ ಸಾಂಪ್ರಾದಾಯಿಕ ಹಾಡುಗಳು ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಇದಕ್ಕೂ ಮುನ್ನ ದಿನವಾದ ಶನಿವಾರ ಸಂಜೆ ಭಕ್ತರಿಂದ ಅಗ್ನಿ ಪ್ರವೇಶ ನಂತರ ರಾತ್ರಿ ಉಚ್ಛಾಯ ಹಾಗೂ ಭಜನೆ, ಬಯಲಾಟ ಕಾರ್ಯಕ್ರಮಗಳು ಜರುಗಿದವು. ಜಾತ್ರೆಯ ನಿಮಿತ್ತ ಆಂಜನೇಯ ಸ್ವಾಮಿ ರಥಕ್ಕೆ ಹೂಮಾಲೆಗಳಿಂದ ಸಿಂಗರಿಸಲಾಗಿತ್ತು. ಏಕಶಿಲಾ ಕಂಬ (ಹಾಲಗಂಬ)ಕ್ಕೆ ನಾನಾ ತರಹದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವೈಭವದ ರಥೋತ್ಸವಕ್ಕೆ ನೆರೆಯ ಬಾಲಚೇಡ, ದದ್ದಲ್, ರಾಂಪುರ, ಸೈದಾಪುರ, ದುಪ್ಪಲ್ಲಿ ಅಜಲಾಪುರ, ಕಡೇಚೂರ, ನೀಲಹಳ್ಳಿ, ಕಣೇಕಲ್, ಮಾಧ್ವಾರ, ಸಣ್ಣ ಸಂಬರ, ವಂಕಸಂಬರ, ಚೇಲೇರಿ, ಇಡ್ಲೂರು, ತೋರಣತಿಪ್ಪ, ಯಲ್ಸತ್ತಿ ಗ್ರಾಮಸ್ಥರು ಸೇರಿದಂತೆ ಪಕ್ಕದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮುಖ್ಯಾಂಶಗಳು
ಪಾದಗಟ್ಟೆಯಲ್ಲಿ ದೇವರಿಗೆ ವಿಶೇಷ ಪೂಜೆ

ಸಾಂಪ್ರಾದಾಯಿಕ ಆಚರಣೆ, ಭಕ್ತಿಯ ಪರಾಕಾಷ್ಠೆ

ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವ ಸಮೂಹ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !