ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಸ್ಮರಣೆಯಿಂದ ನೆಮ್ಮದಿ; ಪಂಡಿತ್ ನರಹರಿ ಆಚಾರ್ಯ

Last Updated 17 ಜನವರಿ 2022, 5:10 IST
ಅಕ್ಷರ ಗಾತ್ರ

ಕೆಂಭಾವಿ: ಎಷ್ಟೋ ವರ್ಷಗಳ ಫಲದಿಂದ ಮನುಷ್ಯ ಜನ್ಮ ದೊರೆತಿದ್ದು, ಅದನ್ನು ಸಾರ್ಥಕ ಪಡಿಸಿಕೊಳ್ಳಲು ಭಾಗವತಾದಿ ಗ್ರಂಥಗಳ ಶ್ರವಣ, ದೇವರ ಹಾಗೂ ಗುರುಗಳ ಮೇಲೆ ಭಕ್ತಿ ಇರಿಸಬೇಕು ಎಂದು ಮುತ್ತಿಗಿ ಕ್ಷೇತ್ರದ ಪಂಡಿತ್ ನರಹರಿ ಆಚಾರ್ಯ ಹೇಳಿದರು.

ಪಟ್ಟಣದ ಉತ್ತರಾದಿ ಮಠದಲ್ಲಿ ನಾಲ್ಕು ದಿನ ನಡೆದ ರಘೋತ್ತಮ ತೀರ್ಥರ ಆರಾಧನೆಯ ಪ್ರಯುಕ್ತ ಈಚೆಗೆ ಉಪನ್ಯಾಸ ನೀಡಿ, ಅವರು ಮಾತನಾಡಿದರು.

ಮನುಷ್ಯರಾಗಿ ಜನಿಸಿದ ನಾವು, ಸತ್ಕರ್ಮಗಳನ್ನು ಮಾಡಿ ಭಗವಂತನ ಪ್ರೇರಣೆ ಪಡೆದು ಮೋಕ್ಷ ಪ್ರಾಪ್ತಿ ಕಂಡುಕೊಳ್ಳಬೇಕು. ದಾಸರು ಭಗವಂತನ ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದು, ಅವುಗಳನ್ನು ಹಾಡುವ ಮೂಲಕ ಭಗವಂತನ ನಾಮಸ್ಮರಣೆ ಮಾಡಬೇಕು. ಪುಣ್ಯಕ್ಷೇತ್ರಗಳ ದರ್ಶನ ಸೇರಿದಂತೆ ಭಗವಂತನ ಸಾಮಿಪ್ಯ ಹೊಂದುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕೋವಿಡ್ ಮಾರ್ಗಸೂಚಿ ಪಾಲಿಸಿ, ಕೇವಲ ಮಠಕ್ಕೆ ಸೀಮಿತವಾಗಿ ಕೆಲವೇ ಭಕ್ತರ ಸಮ್ಮುಖದಲ್ಲಿ ರಘೋತ್ತಮ ತೀರ್ಥರ ಆರಾಧನೆಯ ಮಾಡಲಾಯಿತು ಎಂದು ಉತ್ತರಾದಿ ಮಠದ ಅರ್ಚಕ ಸರ್ವೋತ್ತಮಾಚಾರ್ಯ ಜೋಶಿ ತಿಳಿಸಿದರು.

ಆರಾಧನಾ ಮಹೋತ್ಸವದಲ್ಲಿ ಸುಪ್ರಭಾತ, ಅಷ್ಟೋತ್ತರ, ಪಂಚಾಂಮೃತ, ಯತಿಚತುಷ್ಟಯರ ವೃಂದಾವನಕ್ಕೆ ಹೂಗಳಿಂದ ವಿಶೇಷ ಅಲಂಕಾರ, ಪಲ್ಲಕ್ಕಿ ಸೇವೆ, ರಥೋತ್ಸವ, ತೀರ್ಥಪ್ರಸಾದ, ಕಲಾವಿದರಿಂದ ಸಂಗೀತ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಜಯಾಚಾರ್ಯ ಪುರೋಹಿತ ಹಾಗೂ ತಿರುಮಲಾಚಾರ್ಯ ಜೋಶಿ ಅವರು ಅನ್ನಸಂತರ್ಪಣೆ ಮಾಡಿದರು. ಜಯಸತ್ಯಪ್ರಮೋದ ಸೇವಾ ಸಂಘದ ಪದಾಧಿಕಾರಿಗಳು, ರಘೋತ್ತಮ ಭಜನಾ ಮಂಡಳಿ, ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT