ಸೋಮವಾರ, ಮೇ 10, 2021
19 °C
ಜಿಲ್ಲೆಯಾದ್ಯಂತ ಧ್ವಜಾರೋಹಣ ನೇರವೇರಿಸಿದ ಗಣ್ಯರು, ಅಂಬೇಡ್ಕರ್, ಗಾಂಧೀಜಿ ಭಾವಚಿತ್ರಕ್ಕೆ ಪೂಜೆ

ಯಾದಗಿರಿ ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್, ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿವಿಧ ಗ್ರಾಮಗಳಲ್ಲಿ ಧ್ವಜಾರೋಹಣ ನೇರವೇರಿಸಿದ ಗಣ್ಯರು, ಸ್ವಾತಂತ್ರ್ಯ ಭಾರತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಕೊಡುಗೆ ಕೊಟ್ಟು ದೇಶದ ಏಳಿಗೆಗೆ ಮುನ್ನುಡಿ ಬರೆದಿದ್ದಾರೆ. ಹರಿದು ಹಂಚಿ ಹೋಗಿದ್ದ ರಾಜ್ಯಗಳನ್ನು ಒಂದೇ ದೇಶವಾಗಿ ಮಾಡಲು ಶ್ರಮಿಸಿದ್ದಾರೆ ಎಂದರು.

ಎಲ್‌ಐಸಿ ಕಚೇರಿ: ನಗರದ ಭಾರತೀಯ ಜೀವ ವಿಮಾ ನಿಗಮ ಕಚೇರಿಯಲ್ಲಿ ಶಾಖಾಧಿಕಾರಿ ಸಾಯಿ ಕುಮಾರ್ 72ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದರು.

ನೌಕರರ ಸಂಘದ ಅಧ್ಯಕ್ಷ ಅಸರ ಅಹ್ಮದ, ಎಂ.ಬಿ.ದೊಡ್ಡಮನಿ, ಅಭಿವೃದ್ಧಿ ಅಧಿಕಾರಿಗಳಾದ ಆರ್.ಪಿ.ಕುಪ್ಪಿ, ಗಂಗಾಧರ, ಸುನೀಲ್ ಬೇವಿನಕಟ್ಟಿ, ಪ್ರತಿನಿಧಿಗಳಾದ ಮರೆಪ್ಪ ಬಿಳ್ಹಾರ, ಬೀರಪ್ಪ ಪೂಜಾರಿ, ವಿಶ್ವನಾಥ್ ಪೂಜಾರಿ, ಸಿಬ್ಬಂದಿ ಬಸಲಿಂಗಪ್ಪ ರಾಮತಾಳ, ಮುನಿಯಪ್ಪ, ದೊಡ್ಡಪ್ಪ ಕೊಟಿಮನಿ, ತೋಟದ ಪ್ರಧಾನಿ ಇದ್ದರು.

ಜಿಲ್ಲಾ ನ್ಯಾಯಾಲಯದ ಆವರಣ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 72ನೇ ಗಣರಾಜ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಎಸ್.ಶ್ರೀಧರ ಧ್ವಜಾರೋಹಣ ಮಾಡಿ ಮಾತನಾಡಿದರು.

ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಸ್.ಪಿ.ನಾಡೇಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ನಾಮದೇವ ಸಾಲಮಂಟಪಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅಶ್ರೀನಾ, ಸಂಘದ ಉಪಾಧ್ಯಕ್ಷ ಶಿವಕುಮಾರ ಅನಪುರ, ಪ್ರಧಾನ ಕಾರ್ಯದರ್ಶಿ ಗೋವಿಂದ ಜಾಧವ, ಜಂಟಿ ಕಾರ್ಯದರ್ಶಿ ನಾಗರಾಜ ಯರಗೋಳ, ಸಂಘದ ಕೋಶಧ್ಯಾಕ್ಷ ಮೌನೇಶ ಬಡಿಗೇರ, ಹಿರಿಯ ವಕೀಲರಾದ ಬಿ.ಜಯಚಾರ್ಯ, ಜಿ.ನಾರಾಯಣರಾವ್, ಸುರೇಶ ಕಲಾಲ, ನಾಗಯ್ಯ ಗುತ್ತೇದಾರ, ಬಸವರಾಜ ಹಾಲಗೇರಾ, ಸರ್ಕಾರಿ ಅಭಿಯೋಜಕರಾದ ವಿಶ್ವನಾಥ ಹೊಬಾಳೆ, ಹಾಗೂ ರಾಜಕುಮಾರ ಇದ್ದರು.

ಪತ್ರಿಕಾ ಭವನದಲ್ಲಿ ಧ್ವಜಾರೋಹಣ: ನಗರದ ಪತ್ರಿಕಾ ಭವನದಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದುಧರ ಸಿನ್ನೂರು ಧ್ವಜಾರೋಹಣ ನೆರವೇರಿಸಿದರು.

ರಾಜ್ಯ ಪರಿಷತ್‌ ಸದಸ್ಯ ಅನಿಲ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ, ಸಿದ್ದಪ್ಪ ಲಿಂಗೇರಿ, ಸೈಯ್ಯದ ಸಾಜೀದ್ ಹಯ್ಯಾತ್, ರಾಜಕುಮಾರ ನಳ್ಳಿಕರ, ಕುಮಾರಸ್ವಾಮಿ ಕಲಾಲ, ರವೀಂದ್ರಗೌಡ, ನಾಗಪ್ಪ ಮಾಲಿಪಾಟೀಲ್, ನಾಗಪ್ಪ ನಾಯ್ಕಲ್‌, ಮಲ್ಲಣಗೌಡ ಇದ್ದರು.

ಕರವೇ ಕಾರ್ಯಾಲಯ: ನಗರದ ಕರವೇ ಕಾರ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 190ನೇ ಹುತಾತ್ಮ ದಿನ ಆಚರಿಸಲಾಯಿತು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಯುವ ಘಟಜದ ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಅಂಬುರಾಜ ನಾಯಕ, ಅಂಬ್ರೇಷ್ ಹತ್ತಿಮನಿ, ಅಬ್ದುಲ್ ಅಜೀಜ್, ಕಾಶಿನಾಥ ನಾನೇಕ, ನಾಗು ತಾಂಡೂರಕರ್, ವಿಜಯ ರಾಠೋಡ, ಶಿವು ಪೂಜಾರಿ, ಶಿವಕುಮಾರ, ಮೌನೇಶ ಗುತ್ತೇದಾರ ಇದ್ದರು.

ಜೆಡಿಎಸ್‌ ಕಾರ್ಯಾಲಯ: ಜಿಲ್ಲಾ ಜೆಡಿಎಸ್‌ ಕಾರ್ಯಾಲಯದಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಜೆಡಿಎಸ್ ಹಿರಿಯ ಮುಖಂಡ ಚೆನ್ನಪ್ಪಗೌಡ ಮೋಸಂಬಿ ಧ್ವಜಾರೋಹಣ ನೆರವೇರಿಸಿದರು. ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬಿರನಕಲ್, ಮುಖಂಡರಾದ ವಿಶ್ವನಾಥ ಸಿರವಾರ, ನಾಗರತ್ನ ಅನಪುರ, ಬಾಲಪ್ಪ ಚಿಕ್ಕಮೇಟಿ, ಶರಣಪ್ಪ ಗುಳಗಿ, ರಾಜೇಶೇಖರ ದೊರೆ, ಭೋಜಣಗೌಡ, ಅಬ್ದುಲ್ ಖಯ್ಯುಂ, ಮಹಮ್ಮದ್ ಯಾಕೂಬ್, ಬಾಲಮಿತ್ರ, ಶಿವಪ್ಪ ಮುಷ್ಟೂರು, ಬಸವರಾಜ ಗಿರೆಪ್ಪನೋರ, ಯಂಕಪ್ಪ ಗೊಸಿ, ವೀರಭದ್ರಪ್ಪ, ಶರಣಪ್ಪ ಮಡಶೆಟ್ಟಿ, ನಿಜಾಮುದ್ದೀನ್, ಮಲ್ಲು ಗುತ್ತೇದಾರ, ಉದಯಕುಮಾರ, ರಿಯಾಜ್ ಅಹಮ್ಮದ್, ಶಾಮುವೆಲ್, ಕಾಶಿನಾಥ ಮುದ್ನಾಳ, ಮಂಜುನಾಥ ಅಬ್ಬೆತುಮಕೂರು ಇದ್ದರು.

ಎಸ್‌ಡಿ ವಿದ್ಯಾಸಂಸ್ಥೆ: ನಗರದ ಕೋಟಗಾರವಾಡ ವಿದ್ಯಾ ನಗರದಲ್ಲಿ ಎಸ್‌ಡಿ ಶಿಕ್ಷಣ ಸಂಸ್ಥೆಯ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಈ ವೇಳೆ ಶಾಲೆಯ ನೂತನ ನಾಮಫಲಕವನ್ನು ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ ಉದ್ಘಾಟಿಸಿದರು. ಯುವ ಮುಖಂಡ ನಾಗರಾಜ ಬೀರನೂರು, ಎಸ್‌ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ದುರ್ಗಪ್ಪ ಪೂಜಾರಿ, ಶಿಕ್ಷಕರಾದ ಲೋಕೇಶ್ವರಿ ರಾಠೋಡ, ಶಿವರಾಜ ಪೂಜಾರಿ, ಶಿವಪ್ಪ ಶಿರಗೋಳ, ಸುಜ್ಞಾನ ಪೂಜಾರಿ ಹಾಗೂ ಶಾಲೆಯ ಮಕ್ಕಳು ಇದ್ದರು.

ಸವಿತಾ ಸಮಾಜ: ನಗರದ ಸವಿತಾ ಸಮಾಜ ಭವನದಲ್ಲಿ ಜಿಲ್ಲಾ ಸವಿತಾ ಸಮಾಜದ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗೌರವಾಧ್ಯಕ್ಷ ವಿಶ್ವನಾಥ ಬಸವನಗುಡಿ, ಹಿರಿಯ ಮುಖಂಡ ಗೋಪಾಲ ಕಿಲ್ಲೇದ, ತಾಲ್ಲೂಕು ಅಧ್ಯಕ್ಷ ನಾಗಪ್ಪ ಹತ್ತಿಕುಣಿ, ಮುಖಂಡರಾದ ಬನ್ನಪ್ಪ ಕಿಲ್ಲನಕೇರಾ, ರಮೇಶ ಹಕಿಮ್, ವೀರೇಶ ರಾಯಚೂರು,  ಶಂಕರ ಕಲ್ಮನಿ, ಅಂಬು ಹೋರುಂಚಾ, ಅಶೋಕ ಗೌನಳ್ಳಿ, ಮಂಜುನಾಥ ಕಿಲ್ಲೇದ, ಮಲ್ಲಿಕಾರ್ಜುನ ಮಲ್ಹಾರ, ನಾಗರಾಜ ಹೊಸಮನಿ, ಅಂಜು ಬಸವನಗುಡಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು