ಶನಿವಾರ, ಡಿಸೆಂಬರ್ 7, 2019
22 °C

ಕೆಂಭಾವಿ ತಾಲ್ಲೂಕಿಗಾಗಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಕೆಂಭಾವಿ ತಾಲ್ಲೂಕಿಗಾಗಿ ಹೋರಾಟ ಸಮಿತಿ ಸುಮಾರು 45 ವರ್ಷಗಳಿಂದ ಹೋರಾಡುತ್ತಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ, ರಾಜಕೀಯ ಹಿತಾಸಕ್ತಿಯಿಂದ ಕೆಂಭಾವಿ ತಾಲ್ಲೂಕು ಮಾಡಲು ಆಗುತ್ತಿಲ್ಲ ಎಂದು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಹದನೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಹೋರಾಟ ಸಮಿತಿ ಮತ್ತು ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜೂನ್‌ 13, 1974 ರಿಂದ ಹೋರಾಟವನ್ನು ಆರಂಭಿಸಲಾಗಿದೆ. ಸುಮಾರು 45 ವರ್ಷಗಳಿಂದ ಹೋರಾಟ ಮಾಡಿದರೂ ಪಟ್ಟಣವನ್ನು ತಾಲ್ಲೂಕನ್ನಾಗಿ ಮಾಡಲಾಗಿಲ್ಲ. ಕರ್ನಾಟಕ ನವ ನಿರ್ಮಾಣ ಸೇನೆ ಯುವಕರು ಹೋರಾಟಕ್ಕೆ ಕೈ ಜೋಡಿದ್ದಾರೆ.  ಸಂಘಟಿತರಾಗಿ ಹೋರಾಡಿದಾಗ ಯಶಸ್ವಿಯಾಗಲು ಸಾಧ್ಯ. ಕೆಂಭಾವಿ ತಾಲ್ಲೂಕು ಮಾಡುವ ವರೆಗೂ ಹೋರಾಡೋಣ ಎಂದು ಹೇಳಿದರು.

ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಅಧ್ಯಕ್ಷ ಪ್ರಶಾಂತ ದೊಡ್ಡಮನಿ ಮಾತನಾಡಿ,  ಶಾಂತಿ ಅಥವಾ ಕ್ರಾಂತಿಯಿಂದಾಗಲಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂದರು.

ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಸಜ್ಜನ, ನಿಂಗನಗೌಡ ಅಮಲಿಹಾಳ, ಶರಣಪ್ಪ ಬಂಡೋಳಿ ಮಾತನಾಡಿದರು.

ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ರಾಮನಗೌಡ ಹೊಸಮನಿ ಯಾಳಗಿ, ಶರಣಗೌಡ ಗೂಗಲ್, ಕೃಷ್ಣ ಪರಸನಹಳ್ಳಿ, ಸಚಿನ್ ನಾಯಕ, ಶಿವು ಸಾಸನೂರ ಇದ್ದರು. ಚಾಂದಪಾಶಾ ನಿರೂಪಿಸಿದರು. ಡೇವಿಡ್ ಸ್ವಾಗತಿಸಿದರು. ಭಾಸ್ಕರಗೌಡ ವಂದಿಸಿದರು.

ಪ್ರತಿಕ್ರಿಯಿಸಿ (+)