ಹುಣಸಗಿ: ‘ಸಂವಿಧಾನದ ಆಶಯದಂತೆ ಮಾದಿಗ ಸಮುದಾಯಕ್ಕೆ ಸಿಗಬೇಕಾಗಿರುವ ಹಕ್ಕನ್ನು ಸರ್ಕಾರ ಕೂಡಲೇ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ಕೊಡಬೇಕಾಗುತ್ತದೆ’ ಎಂದು ವಕೀಲ ನಂದಕುಮಾರ ಬಾಂಬೆಕರ್ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಮಾದಿಗ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ಹುಣಸಗಿ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆಯ ನಂತರ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಸುರ್ಪಿಂ ಕೋರ್ಟ್ ಸೂಕ್ತ ನಿರ್ದೇಶನ ನೀಡಿದ್ದರೂ ಕೂಡಾ ರಾಜ್ಯ ಸರ್ಕಾರ ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿರವುದು ಏತಕ್ಕೆ?. ಇದರ ಹಿಂದೆ ಒಬ್ಬರ ಹಿತಕ್ಕಾಗಿ ಬಹುತೇಕರಿಗೆ ಅನ್ಯಾಯ ಮಾಡುತ್ತಿರುವುದು ಒಳ್ಳೇಯ ಬೆಳವಣಿಗೆಯಲ್ಲ’ ಎಂದು ಆರೋಪಿಸಿದರು.

‘ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ನಮ್ಮ ಹಕ್ಕು. ಜನಸಂಖ್ಯೆ ಅನುಗುಣವಾಗಿ ಶೇ.6ರಷ್ಟು ಮೀಸಲಾತಿ ಮಾದಿಗರಿಗೆ ದೊರಕಬೇಕು’ ಎಂದರು.

ಹಿರಿಯ ಮುಖಂಡ ಅಮಲಪ್ಪ ಹಳ್ಳಿ ಹಾಗೂ ಬಸವರಾಜ ಕಾಮನಟಗಿ ಮಾತನಾಡಿ, ‘ಶೇ.17 ರಲ್ಲಿ ಅಥವಾ ಶೇ.15 ರಲ್ಲಿ ಒಳಮೀಸಲಾತಿ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಇದನ್ನು ಸರಿ ಪಡಿಸದ ಹೊರತು ಯಾವುದೇ ಹುದ್ದೆಯನ್ನು ಭರ್ತಿ ಮಾಡಬಾರದು’ ಎಂದು ಒತ್ತಾಯಿಸಿದರು.

ಹನುಮಂತ ಬೊಮ್ಮನಳ್ಳಿ ಮಾತನಾಡಿ, ‘ಎಲ್ಲ ವರದಿಗಳು, ಆಯೋಗಗಳು ತಮ್ಮ ವರದಿಯನ್ನು ಸಲ್ಲಿಸಿಯಾಗಿದೆ. ಕೂಡಲೇ ಸರ್ಕಾರ ಸಂಪುಟ ಸಭೆಯ ಮೂಲಕ ಮಾದಿಗರ ಹಿತ ಕಾಪಾಡುವಲ್ಲಿ ಮುಂದಾಗಲಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಉಗ್ರ ಸ್ವರೂಪದ ಹೋರಾಟಕ್ಕೆ ಇಳಿಯಲಾಗುವುದು’ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಹುಣಸಗಿ ತಹಶೀಲ್ದಾರ್ ಎಂ.ಬಸವರಾಜ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಹಿರಿಯ ಮುಖಂಡ ಶಿವಪ್ಪ ಸದಬ, ತಿಪ್ಪಣ್ಣ ಕಡಿಮನಿ, ನಂದಪ್ಪ ಪೀರಾಪುರ, ಮಲ್ಲಣ್ಣ ದೊಡ್ಡಮನಿ ವಜ್ಜಲ, ಮಾನಪ್ಪ ಕಟ್ಟಿಮನಿ, ಶಾಂತಪ್ಪ ಹಗರಟಗಿ, ಬಸವರಾಜ ಕೊಡೇಕಲ್ಲ, ಸಿದ್ದು ಮೇಲಿನಮನಿ, ಮಹಾಂತೇಶ ದೊಡ್ಡಮನಿ, ನಾಗರಾಜ ಕೊಡೇಕಲ್ಲ, ಪವಾಡೆಪ್ಪ ಮ್ಯಾಗೇರಿ, ಕಾಶಿನಾಥ ಹಾದಿಮನಿ, ಮಲ್ಲಿಕಾರ್ಜುನ ವಜ್ಜಲ, ಬಸಪ್ಪ ಕಟ್ಟಿಮನಿ ಕೊಡೇಕಲ್ಲ, ಸಂಗಣ್ಣ ಅಗ್ನಿ, ಹುಲಗಪ್ಪ ಬೈಲಕುಂಟಿ, ದೇವಪ್ಪ ಮಂಜಲಾಪುರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂದ್ಗೆ ಬೆಂಬಲ

ಮಾದಿಗ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಂಘಟನೆಗಳ ಕರೆ ನೀಡಿದ್ದ ಬಂದ್ ಹುಣಸಗಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಔಷಧ ಅಂಗಡಿ ಆಸ್ಪತ್ರೆಗಳು ಹೊರತು ಪಡಿಸಿ ಎಲ್ಲ ವ್ಯಾಪಾರಸ್ಥರು ಸ್ವಯಂ ಪ್ರೇರಿತ ಬಂದ್ ಬೆಂಬಲಿಸಿ ಮಧ್ಯಾಹ್ನದ ವರೆಗೂ ಪಟ್ಟಣದ ಅಂಗಡಿ-ಮಳಿಗೆಗಳನ್ನು ಮುಚ್ಚಿದ್ದರು. ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದವು. ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಬಸ್ ನಿಲ್ದಾಣದ ಮುಂದಿನ ರಸ್ತೆ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಿಪಿಐ ರವಿಕುಮಾರ ನೇತೃತ್ವದಲ್ಲಿ ಪಿಎಸ್ಐ ರಾಹುಲ್ ಪವಾಡೆ ಅಯ್ಯಪ್ಪ ಭಾಗಣ್ಣ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.