ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ, ಕಕ್ಕೇರಾ ಪುರಸಭೆಗಳಲ್ಲಿ ಮಹಿಳೆಯರಿಗೆ ಮಣೆ

ಕೆಂಭಾವಿ, ಕಕ್ಕೇರಾ ಪುರಸಭೆ
Last Updated 17 ಡಿಸೆಂಬರ್ 2021, 5:16 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆ ಇದೇ 27ರಂದು ನಡೆಯಲಿದ್ದು, ಶೇ 50ರಷ್ಟು ಮೀಸಲಾತಿ ಕಾರಣ ಮಹಿಳೆಯರು ಸ್ಪರ್ಧಿಸಲು ಮೀಸಲಾತಿ ಕಲ್ಪಿಸಲಾಗಿದೆ.

2011ರ ಜನಗಣತಿಯನ್ನು ಆಧರಿಸಿ ಎರಡು ಪುರಸಭೆಗಳಿಗೆ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿದೆ. ಇದರಿಂದ ಹೆಚ್ಚಿನ ಪಾಲು ಮಹಿಳೆಯರಿಗೆ ದಕ್ಕಿದೆ.

ಕಕ್ಕೇರಾ ಮತ್ತು ಕೆಂಭಾವಿಯಲ್ಲಿ ತಲಾ 23 ಸ್ಥಾನಗಳಿವೆ. ಇದರಲ್ಲಿ ತಲಾ 11 ಮಹಿಳೆಯರಿಗೆ ಮೀಸಲಾತಿ ನಿಗದಿ ಪಡಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಇರುವುದರಿಂದ ಹೆಚ್ಚು ಸ್ಪರ್ಧೆ ಮಾಡುತ್ತಿದ್ದಾರೆ.

ಕೆಂಭಾವಿ ಮೀಸಲಾತಿ ವಿವರ: ವಾರ್ಡ್‌ ಸಂಖ್ಯೆ 1ರ ಕೆಂಚಮ್ಮ ಗುಡಿ ಏರಿಯಾ (ಹಿಂದುಳಿದ ವರ್ಗ–ಎ–ಮಹಿಳೆ), ವಾರ್ಡ್‌ ಸಂಖ್ಯೆ 2 ಪಾಲ್ಕಮ್ಮ ಗುಡಿ ಏರಿಯಾ, (ಸಾಮಾನ್ಯ –ಮಹಿಳೆ), ವಾರ್ಡ್‌ 5 ಸೊನ್ನದ ಏರಿಯಾ (ಸಾಮಾನ್ಯ–ಮಹಿಳೆ), ವಾರ್ಡ್‌ 7 ರಾಘವೇಂದ್ರ ಕಾಲೊನಿ (ಹಿಂದುಳಿದ ವರ್ಗ ಮಹಿಳೆ), ವಾರ್ಡ್‌ 8 ಜಂಡಾಗಟ್ಟಿ (ಸಾಮಾನ್ಯ ಮಹಿಳೆ), ವಾರ್ಡ್‌ 11 ಗೌಡರ ಓಣಿ (ಸಾಮಾನ್ಯಮಹಿಳೆ), ವಾರ್ಡ್‌ 15 ಹಿಲ್‌ಟಾಪ್‌ ಕಾಲೊನಿ (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್‌ 17 ಸಂಜೀವನಗರ–2 (ಸಾಮಾನ್ಯ ಮಹಿಳೆ), ವಾರ್ಡ್‌ 21 ವರಹಳ್ಳೆರಾಯ ಬಡಾವಣೆ (ಪರಸನಹಳ್ಳಿ–1) (ಪರಿಶಿಷ್ಟ ಪಂಗಡ ಮಹಿಳೆ), ವಾರ್ಡ್‌ 22 ಲಕ್ಷ್ಮೀ ಗುಡಿ ಏರಿಯಾ (ಪರಸನಹಳ್ಳಿ–2) (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್‌ 23 ಕೆಂಚೆಮ್ಮ ಗುಡಿ ಏರಿಯಾ (ಪರಸನಹಳ್ಳಿ–3) (ಸಾಮಾನ್ಯ ಮಹಿಳೆ) ಇದು ಕೆಂಭಾವಿ ಪುರಸಭೆಗೆ ಸಂಬಂಧಿಸಿದ ಮಹಿಳೆಯರಿಗೆಮೀಸಲಾಗಿದೆ.

ವಾರ್ಡ್‌ 3ರ ಎಸ್‌ಬಿಸಿ ಕ್ಯಾಂಪ್‌ ಏರಿಯಾ (ಸಾಮಾನ್ಯ), ವಾರ್ಡ್‌ 4 ದಿಗ್ಗಾವಿ ಓಣಿ (ಹಿಂದುಳಿದ ವರ್ಗ ಎ), ವಾರ್ಡ್‌ 6 ನಾಡಗೌಡ ಏರಿಯಾ (ಹಿಂದುಳಿದ ವರ್ಗ–ಬಿ), ವಾರ್ಡ್‌ 9 ಖಾಜಿ ಓಣಿ (ಸಾಮಾನ್ಯ), ವಾರ್ಡ್‌ 10 ಮಲ್ಲಯ್ಯ ಗುಡಿ ಏರಿಯಾ (ಹಿಂದುಳಿದ ವರ್ಗ–ಎ), ವಾರ್ಡ್‌ 12 ಕೆಳಗೇರಿ (ಸಾಮಾನ್ಯ), ವಾರ್ಡ್‌ 13 ಕುಂಬಾರ ಓಣಿ (ಪರಿಶಿಷ್ಟ ಪಂಗಡ), ವಾರ್ಡ್‌ 14 ಮ್ಯಾಗೇರಿ (ಪರಿಶಿಷ್ಟ ಜಾತಿ), ವಾರ್ಡ್‌ 16 ಆಶ್ರಯ ಕಾಲೊನಿ (ಡಾ.ಬಿ.ಆರ್‌.ಅಂಬೇಡ್ಕರ್‌ ನಗರ್ ) (ಸಾಮಾನ್ಯ), ವಾರ್ಡ್‌ 18 ಸಂಜೀವನ ನಗರ –1 (ಪರಿಶಿಷ್ಟ ಜಾತಿ), ವಾರ್ಡ್‌ 19 ಸಾಯಿ ನಗರ ಏರಿಯಾ (ಸಾಮಾನ್ಯ), ವಾರ್ಡ್‌ 20 ಪತ್ತೆಪುರ (ಸಾಮಾನ್ಯ) ಕ್ಷೇತ್ರ ಮೀಸಲಾತಿ ಹೊಂದಿದ ವಾರ್ಡ್‌ಗಳು.

ಕಕ್ಕೇರಾ ಮೀಸಲಾತಿ ವಿವರ: ವಾರ್ಡ್‌ ನಂ. 1 ಯುಕೆಪಿ ಕ್ಯಾಂಪ್‌ (ಸಾಮಾನ್ಯ (ಮಹಿಳೆ), ವಾರ್ಡ್‌ ನಂ. 3 ಹೊಸ ಬಸ್‌ ನಿಲ್ದಾಣ ಏರಿಯಾ (ಸಾಮಾನ್ಯ ಮಹಿಳೆ), ವಾರ್ಡ್‌ ನಂ. 5 ಗುರಿಕಾರ ಓಣಿ (ಸಾಮಾನ್ಯ ಮಹಿಳೆ), ವಾರ್ಡ್‌ ನಂ. 7 ಡಾ.ಬಿ.ಆರ್.ಅಂಬೇಡ್ಕರ್‌ ನಗರ (ಸಾಮಾನ್ಯ ಮಹಿಳೆ), ವಾರ್ಡ್‌ ನಂ. 8 ಹಳೆ ಗ್ರಾಮ ಪಂಚಾಯಿತಿ ಏರಿಯಾ (ಪರಿಶಿಷ್ಟ ಪಂಗಡ ಮಹಿಳೆ), ವಾರ್ಡ್‌ ನಂ.12 ಯರಿಬಂಡಿ (ಪರಿಶಿಷ್ಟ ಪಂಗಡ ಮಹಿಳೆ), ವಾರ್ಡ್‌ ನಂ. 14 ಕಕ್ಕೇರಾ ತಾಂಡಾ (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್‌ ನಂ.17 ಗೊಲ್ಲಾಪಲ್ಲೇರದೊಡ್ಡಿ (ಸಾಮಾನ್ಯ ಮಹಿಳೆ), ವಾರ್ಡ್‌ ನಂ.19 ಮಲ ಮತ್ತೇರದೊಡ್ಡಿ (ಸಾಮಾನ್ಯ ಮಹಿಳೆ), ವಾರ್ಡ್‌ ನಂ. 20 ಬುದಗುಂಪೆರದೊಡ್ಡಿ (ಪರಿಶಿಷ್ಟ ಪಂಗಡ ಮಹಿಳೆ), ವಾರ್ಡ್‌ ನಂ.22 ನಿಂಗಾಪುರ ಎಂ (ಪರಿಶಿಷ್ಟ ಪಂಗಡ ಮಹಿಳೆ) ಇದು ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳು.

ವಾರ್ಡ್‌ ನಂ. 2 ಕಿಲ್ಲೇದಗಿಡ್ಡಿ ( ಸಾಮಾನ್ಯ), ವಾರ್ಡ್‌ ನಂ.4 ಹಳೆ ಬಜಾರ್‌ (ಸಾಮಾನ್ಯ), ವಾರ್ಡ್‌ ನಂ. 6 ಶಟ್ಟರ್‌ ಓಣಿ (ಪರಿಶಿಷ್ಟ ಪಂಗಡ), ವಾರ್ಡ್‌ ನಂ. 9 ಸೋಮನಾಥ ಗುಡಿ ಏರಿಯಾ (ಪರಿಶಿಷ್ಟ ಪಂಗಡ), ವಾರ್ಡ್‌ ನಂ. 10 ಪ್ಯಾಟಿ ಓಣಿ (ಪರಿಶಿಷ್ಟ ಪಂಗಡ), ವಾರ್ಡ್‌ ನಂ.11 ದಳಾರದೊಡ್ಡಿ (ಸಾಮಾನ್ಯ), ವಾರ್ಡ್‌ ನಂ. 13 ಬುದನೂರದೊಡ್ಡಿ (ಸಾಮಾನ್ಯ), ವಾರ್ಡ್‌ ನಂ.15 ಪಿರಿನಾಯ್ಕ ತಾಂಡಾ (ಪರಿಶಿಷ್ಟ ಜಾತಿ), ವಾರ್ಡ್‌ ನಂ. 16 ಹೊಸೂರ ಪೈದೊಡ್ಡಿ (ಪರಿಶಿಷ್ಟ ಪಂಗಡ), ವಾರ್ಡ್‌ ನಂ. 18 ಬನದೊಡ್ಡಿ (ಪರಿಶಿಷ್ಟ ಪಂಗಡ), ವಾರ್ಡ್‌ ನಂ. 21 ಮಂಜಲಾಪುರ (ಸಾಮಾನ್ಯ), ವಾರ್ಡ್‌ ನಂ. 23 ಜಂಗಣರದೊಡ್ಡಿ (ಮಂಜಲಾಪುರ) (ಸಾಮಾನ್ಯ) ಇವು ಮೀಸಲಾತಿ ನಿಗದಿ ಪಡಿಸಿದ ಕ್ಷೇತ್ರಗಳು.

ಕೆಂಭಾವಿ ಪುರಸಭೆಯಲ್ಲಿ ಎರಡು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಪರಿಶಿಷ್ಟ ಪಂಗಡ ಮಹಿಳೆಗೆ ಒಂದು ಸ್ಥಾನ, ಹಿಂದುಳಿದ ವರ್ಗ ಎ ಮಹಿಳೆ ಎರಡು, ಸಾಮಾನ್ಯ ಮಹಿಳೆಗೆ 6 ಸ್ಥಾನ ಮೀಸಲಾಗಿದೆ.ಕಕ್ಕೇರಾ ಪುರಸಭೆಯಲ್ಲಿ ಸಾಮಾನ್ಯ ಮಹಿಳೆ 6 ಸ್ಥಾನ, ಪರಿಶಿಷ್ಟ ಪಂಗಡ 4 ಸ್ಥಾನ, ಪರಿಶಿಷ್ಟ ಜಾತಿ 1 ಮಹಿಳೆಗೆ ಮೀಸಲಾಗಿದೆ.

***

‘ಸಾಮಾನ್ಯ ಕಡೆಯೂ ಸ್ಪರ್ಧಿಸಲಿ’
‘ಮಹಿಳೆಯರು ಕೇವಲ ಮಹಿಳಾ ಮೀಸಲಾತಿ ಇರುವ ಕಡೆ ಮಾತ್ರ ಸ್ಪರ್ಧೆ ಮಾಡುತ್ತಿದ್ದು, ಸಾಮಾನ್ಯ ಕ್ಷೇತ್ರಗಳಯೂ ಸ್ಪರ್ಧೆ ಮಾಡಬಹುದಾಗಿದೆ’ಎನ್ನುತ್ತಾರೆ ಅನಸೂಯಬಾಯಿ ಅವರು.

ಈ ಬಗ್ಗೆ ಹೆಚ್ಚಿನ ಜಾಗೃತಿ ಕೊರತೆಯೊ ಅಥವಾ ಸ್ಥಳೀಯ ಹೊಂದಾಣಿಕೆ ಕಾರಣಕ್ಕೊ ಮಹಿಳೆಯರು ಮೀಸಲಾತಿ ಕಣದಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಆಯಾ ಸಮುದಾಯದ ಮಹಿಳೆಯರು ಉಳಿದ ಸಾಮಾನ್ಯ ಕ್ಷೇತ್ರಗಳಲ್ಲೂ (ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ) ಸ್ಪರ್ಧೆ ಮಾಡುವ ಕುರಿತು ಜಾಗೃತಿ ಅವಶ್ಯವಿದೆ’ ಎನ್ನುತ್ತಾರೆ ಅವರು.

***

ಮಹಿಳೆಯರಿಗೆ ಸರ್ಕಾರ ಮೀಸಲಾತಿ ಅವಕಾಶ ಕಲ್ಪಿಸಿಕೊಟ್ಟಿದ್ದು ಉತ್ತಮವಾಗಿದೆ. ನಾನು ಪುರಸಭೆ ಸದಸ್ಯೆ ಇದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದು, ಸಂತಸ ತಂದಿದೆ.
-ಪದ್ಮಾವತಿ ಮಲಕೋಜಿ, ಪುರಸಭೆ ಮಾಜಿ ಸದಸ್ಯೆ ಕಕ್ಕೇರಾ

***

2005ರಲ್ಲಿ ಕಕ್ಕೇರಾ ಗ್ರಾಮ ಪಂಚಾಯಿತಿ ಇದ್ದಾಗ ಮೀಸಲಾತಿಯಿಂದ ಅಧ್ಯಕ್ಷ ಸ್ಥಾನ ಲಭಿಸಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು.
-ಪಾರ್ವತಿ ಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಕಕ್ಕೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT