ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಗೌರವಿಸಿ

ಹುಣಸಗಿ ತಹಶೀಲ್ದಾರ್ ಅಶೋಕಕುಮಾರ ಸುರಪುರಕರ್ ಸಲಹೆ
Last Updated 26 ಜನವರಿ 2022, 13:14 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹುಣಸಗಿ: ‘ಅಖಂಡತೆಯಲ್ಲಿಯೇ ಏಕತೆಯನ್ನು ಹೊಂದಿರುವ ಭಾರತ ನಾಗರಿಕರರಾದ ನಾವೇಲ್ಲರೂ ಸಂವಿಧಾನದ ಆಶಯಗಳನ್ನು ಮೈ ಗೂಡಿಸಿಕೊಂಡು ಮುನ್ನಡೆಯಬೇಕು‘ ಎಂದು ಹುಣಸಗಿ ತಹಶೀಲ್ದಾರ್ ಅಶೋಕಕುಮಾರ ಸುರಪುರಕರ್ ಹೇಳಿದರು.

ಹುಣಸಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಪ್ರೌಢಶಾಲೆಯ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಲಾಗಿದ್ದ 73ನೇ ಗಣರಾಜೋತ್ಸವದ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ದೇಶದ ಪ್ರತಿಯೊಬ್ಬ ನಾಗರಿಕರಿಗೂ ನಮ್ಮ ಸಂವಿಧಾನ ಅವಶ್ಯವಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅವುಗಳನ್ನು ಬಳಸಿಕೊಂಡು ದೇಶದ ಹಿತಕ್ಕಾಗಿ ಜೀವಿಸೋಣ. ದೇಶಕ್ಕಾಗಿ ದುಡಿದ ಮಹಾನ್ ನಾಯಕರ ಚರಿತ್ರೆ ಮಕ್ಕಳಿಗೆ ತಿಳಿಸಿಕೋಡುವ ಅವಶ್ಯಕತೆ ಇದೆ‘ ಎಂದು ಹೇಳಿದರು.

ಉಪಖಜಾನೇ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಮಾತನಾಡಿದರು.

ಪ್ರಗತಿಪರ ರೈತರು ಸೇರಿದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು. ಕೊಡೇಕಲ್ಲ ಉಪ ತಹಶೀಲ್ದಾರ್ ಬಸವರಾಜ ಬಿರಾದಾರ, ಪ್ರವೀಣ ಸಜ್ಜನ್, ಕಲ್ಲಪ್ಪ, ಹುಣಸಗಿ ಸಿಪಿಐ ಎನ್.ಕೆ.ದೌಲತ್, ಪಿ.ಎಸ್.ಐ. ಚಿದಾನಂದ ಸೌದಿ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಜರಿದ್ದರು.

ಮಶಾಕ ಯಾಳಗಿ ಸ್ವಾಗತಿಸಿದರು. ನಾಗನಗೌಡ ಪಾಟೀಲ್ ನಿರೂಪಿಸಿ ವಂದಿಸಿದರು.

ಹುಣಸಗಿ ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಧ್ವಜಾರೋಹಣ ಮಾಡಿದರು.

ಉಪಾಧ್ಯಕ್ಷ ನಾನಾಗೌಡ ಪಾಟೀಲ, ಡಾ. ಎಸ್.ಎಸ್.ಬಿರಾದಾರ , ಭೀಮಶೇನರಾವ್ ಕುಲಕರ್ಣಿ, ಪ್ರಾಚಾರ್ಯ ಬಸವರಾಜ ಮರೋಳ, ನಿಂಗುನಾಯಕ, ನಾಗಪ್ಪ ಸಂದಿಮನಿ, ಬಸವರಾಜ ಪವಾರ್ ಸೇರಿದಂತೆ ಇತರರು ಇದ್ದರು.

ಹುಣಸಗಿ ಪಟ್ಟಣ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಮೇಲಿಮನಿ ಧ್ವಜಾರೋಹಣ ಮಾಡಿದರು. ಪ್ರಗತಿಪರ ರೈತರಾದ ನಂದಕುಮಾರ ಪೂಜಾರಿ, ಸಿದ್ದನಗೌಡ ಬಿರಾದಾರ ಮಾತನಾಡಿದರು. ನಿರ್ಧೇಶಕರಾದ ಶಾಂತಗೌಡ ಅರಕೇರಿ, ಗುರುಲಿಂಗಣ್ಣ ಸಜ್ಜನ್, ದೇವು ಬೈಚಬಾಳ, ವಿನಾಯಕ ಕುಲಕರ್ಣಿ ಇದ್ದರು.

ಕೊಡೇಕಲ್ಲ: ಗಣರಾಜ್ಯೋತ್ಸವ

ಕೊಡೇಕಲ್ಲ ಗ್ರಾಮದಲ್ಲಿ ಬುಧವಾರ ಗಣರಾಜ್ಯೋತ್ಸವ ಆಚರಿಸಲಾಯಿತು.

ಇಲ್ಲಿನ ನಾಡ ಕಚೇರಿಯಲ್ಲಿ ಉಪ-ತಹಶೀಲ್ದಾರ್ ಬಸವರಾಜ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ದೇವು ಚವ್ವಾಣ, ಯಮನಪ್ಪ ಚವನಬಾವಿ, ಪರಶುರಾಮ ಕಾಳಾಪುರ ಮತ್ತಿತರಿದ್ದರು.

ಗುರು ದುರದುಂಡೇಶ್ವರ ಸೌಹಾರ್ಧ ಸಹಕಾರಿ ಬ್ಯಾಂಕ್ ನಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ನೀಲಕಂಠ ಸ್ವಾಮೀಜಿ ವಿರಕ್ತಮಠ, ರಂಗನಾಥ ದೊರೆ, ವಿ.ಎಸ್.ಹಾವೇರಿ, ಕನಕು ಜೀರಾಳ, ಮೋಹನ ಪಾಟೀಲ್, ರವೀಂದ್ರ ಅಂಗಡಿ, ಅಂಬ್ರಣ್ಣ ಸಜ್ಜನ್, ಸಾತಪ್ಪ, ಮಲ್ಲಣ್ಣ ಹೂಗಾರ, ಪಾಯಣ್ಣ, ಸಂಗಣ್ಣ, ಶ್ರೀಶೈಲ ಸಜ್ಜನ್ ಪಾಲ್ಗೊಂಡಿದ್ದರು.

ಆರ್ಟಿಜೆ ಶಿಕ್ಷಣ ಸಂಸ್ಥೆಯಲ್ಲಿ ಎಂ.ಕೆ.ಸಿದ್ದಣ್ಣ ಧ್ವಜಾರೋಹಣ ನೆರವೇರಿಸಿದರು.

ದುರುದುಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಬಿ.ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಮಠದ ಶಿವಕುಮಾರ ಸ್ವಾಮೀಜಿ, ಸಿದ್ದಣ್ಣ ಬಂಟನೂರ ಸೇರಿದಂತೆ ಗ್ರಾಮದ ಪ್ರಮುಖರು, ಸಿಬ್ಬಂದಿ ಇದ್ದರು.

ಜನಕ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ಸೋಮಶೇಖರ ಪಂಜಗಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT