ಶುಕ್ರವಾರ, ಅಕ್ಟೋಬರ್ 23, 2020
27 °C

ಯರಗೋಳ: ಕೊಚ್ಚಿ ಹೋದ ರಸ್ತೆ, ತಾಂಡಾ ಜನರ ಪರದಾಟ

ತೋಟೇಂದ್ರ ಎಸ್‌. ಮಾಕಲ್‌ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿದ ಜೋರಾದ ಮಳೆಗೆ, ವಾರ್ಡ್‌ ಸಂಖ್ಯೆ 5ರ ವ್ಯಾಪ್ತಿಯ ಲಿಂಗಸನಳ್ಳಿ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದು, ತಾಂಡಾ ನಿವಾಸಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಯರಗೋಳ ಗ್ರಾಮದಿಂದ 3 ಕಿ.ಮೀ ದೂರವಿರುವ ಲಿಂಗಸನಳ್ಳಿ ತಾಂಡದಲ್ಲಿ 75 ಮನೆ 350 ಜನರು ವಾಸಮಾಡುವ ಚಿಕ್ಕ ತಾಂಡಾವಾಗಿದೆ. ರಸ್ತೆ ಕೊಚ್ಚಿಕೊಂಡು ಹೋದ ಪರಿಣಾಮ ದಿನನಿತ್ಯದ ವ್ಯವಹಾರಕ್ಕೆ ಯರಗೋಳ ಗ್ರಾಮಕ್ಕೆ ತೆರಳುವ ತಾಂಡಾ ನಿವಾಸಿಗಳು, 5 ದಿನಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.

‘ತಾಂಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರೆ ಇರುವುದರಿಂದ, ಕೃಷಿ ಉತ್ಪನ್ನಗಳು ವಾಹನಗಳ ಮೂಲಕ ದೂರದ ಊರುಗಳಿಗೆ ಸಾಗಾಣೆ ಮಾಡಲು ತೊಂದರೆಯಾಗಿದೆ. ಜಾನುವಾರುಗಳು ಆನಾರೋಗ್ಯದ ಸಮಸ್ಯೆಯಿಂದ ನರಳಾಡುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುದು, ಸೂಕ್ತ ಚಿಕಿತ್ಸೆ ಕೊಡಲಾಗುತ್ತಿಲ್ಲ’ ಎಂದು ತಾಂಡಾ ನಿವಾಸಿಗಳು ನೋವಿನಿಂದ ನುಡಿದರು.

ತಾಂಡಾದ ಯುವಕ ವಿನೋದ ಮಾತನಾಡಿ, ‘ಮಳೆಯಿಂದಾಗಿ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಗರ್ಭಿಣಿಯರಿಗೆ, ವೃದ್ಧರಿಗೆ ಅನಾರೋಗ್ಯದ ಸಮಸ್ಯೆ ಹೆಚ್ಚುತ್ತಿದೆ, ರಾತ್ರಿ ಹೊತ್ತು ಮನೆಬಿಟ್ಟು ಹೊರಗಡೆ ಹೋಗುತ್ತಿಲ್ಲ’ ಎಂದರು.

ಸ್ಥಳಕ್ಕೆ ಬೇಟಿ ನೀಡಿ ವೀಕ್ಷಣೆ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ, ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.