ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಪಾಲಿಸಿ

ರಸ್ತೆ ಸುರಕ್ಷತಾ ಮಾಸಾಚರಣೆ: ಡಿವೈಎಸ್ಪಿ ಸಂತೋಷ ಬನ್ನಟ್ಟಿ ಅಭಿಮತ
Last Updated 3 ಫೆಬ್ರುವರಿ 2021, 12:07 IST
ಅಕ್ಷರ ಗಾತ್ರ

ಗುರುಮಠಕಲ್: ‘ನಿತ್ಯ ಜೀವನದ ಅವಶ್ಯಕತೆಗಾಗಿ ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ರಸ್ತೆಯಲ್ಲಿ ಸಂಚರಿಸಲೇ ಬೇಕು. ಆದರೆ, ರಸ್ತೆ ಸಂಚಾರದ ಸಮಯದಲ್ಲಿನ ಚಿಕ್ಕ ಅಜಾಗರೂಕತೆಯಿಂದ ಸಂಭವಿಸುವ ನಷ್ಟವನ್ನು ಒಮ್ಮೆ ನೆನೆಪಿಸಿಕೊಂಡು ನಿಯಮ ಪಾಲಿಸಿ. ಅದರಿಂದ ನಮಗೆ ಬಹುಮುಖ ಲಾಭವಿದೆ’ ಎಂದು ಡಿವೈಎಸ್ಪಿ ಸಂತೋಷ ಬನ್ನಟ್ಟಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾ ವಿದ್ಯಾಲಯದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳಾದ ರಸ್ತೆ ನಿಯಮಗಳನ್ನು ಅರಿತುಕೊಂಡು ಪಾಲಿಸಬೇಕು. ಜೊತೆಗೆ ಕುಟುಂಬಕ್ಕೂ, ಸುತ್ತಲಿನ ಜನರಿಗೂ ನಿಯಮಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ನಿಯಮಗಳ ಪಾಲನೆಯಿಂದ ನಮ್ಮ ಜೀವ ರಕ್ಷಣೆಯ ಜತೆಗೆ ಇತರರ ಜೀವವನ್ನೂ ರಕ್ಷಿಸಬಹುದು. ಎಲ್ಲರಿಗೂ ಸಂಚಾರ ನಿಯಮಗಳ ಅರಿವು ಅಗತ್ಯ’ ಎಂದರು.

ಪ್ರಾಂಶುಪಾಲ ಮೋನಪ್ಪ ಗಚ್ಚಿನಮನಿ, ಎನ್‌ಎಸ್‌ಎಸ್‌ ಅಧಿಕಾರಿ ಶರಣಪ್ಪ ಗುಂಡಗುರ್ತಿ, ಸಿಪಿಐ ದೇವೀಂದ್ರಪ್ಪ ದೂಳಖೇಡ, ಪಿಎಸ್‌ಐ ಹಣಮಂತಪ್ಪ ಬಂಕಲಗಿ, ಉಪನ್ಯಾಸಕ ಕೃಷ್ಣಪ್ಪ ಚಪೆಟ್ಲಾ ಹಾಗೂ ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT