ಸೋಮವಾರ, ಜನವರಿ 17, 2022
19 °C
ನಾರಾಯಣಪುರ: ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ

‘ಸಮಾಜ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಹಿರಿದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾರಾಯಣಪುರ (ಹುಣಸಗಿ): ಶಿಕ್ಷಕರು ಶಾಲೆಗಳಲ್ಲಿ ಪಠ್ಯ ಬೋಧನೆ ಜೊತೆಗೆ ಜೀವನದ ಮೌಲ್ಯಗಳ ಕುರಿತು ಬೋಧಿಸುವ ವಿಧಾನದಿಂದಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಕೊಡೇಕಲ್ಲ ಬಸವ ಪೀಠದ ಮಹಲಿನ ಮಠದ ವೃಷಬೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2000ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಭಾವ ಬಂಧನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಶಾಲೆಯಲ್ಲಿ ಬೊಧನಾ ಸಂದರ್ಭದಲ್ಲಿ ವಿಶೇಷ ಕಾಳಜಿಯಿಂದ ಬೋಧಿಸುವ ಶಿಕ್ಷಕ ಬಳಗವನ್ನು ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಮರೆಯುವದಿಲ್ಲ. ಅಂತ ಮಹನೀಯ ಗುರುವೃಂದವನ್ನು ಹಳೆ ವಿದ್ಯಾರ್ಥಿಗಳ ಬಳಗ ಸ್ಮರಸಿಕೊಳ್ಳುವದರ ಜೊತೆಗೆ ಸನ್ಮಾನಿಸಿ ಗೌರವಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ ಚಲವಾದಿ, ಪಿ.ಎಂ ದೇಸಾಯಿ, ಎಂ.ಐ ಇನಾಮದಾರ್, ಜಯಮಂಗಲ ಗಾರಂಪಳ್ಳಿ, ಚನ್ನಯ್ಯ ಹಿರೇಮಠ, ಅನಿಲ್ ಬೇತ್, ದೊಂಡಿಬಾ ಸರ್, ಶಂಕರ ಲಮಾಣಿ, ಗುರುಸ್ವಾಮಿ ಹಿರೇಮಠ, ಗಿರೀಶ್ ಜಾವೂರ, ಸಂಗಣ್ಣ ಹಗರಗುಂಡ, ಬಳಬಟ್ಟಿ ಸರ್, ದ್ರಾಕ್ಷಾಯಣಿ, ವಿದ್ಯಾವತಿ, ಮೀನಾಕ್ಷಿ, ಶೋಭಾ, ರತ್ನಾಬಾಯಿ, ಜಯಶ್ರೀ, ಅಬ್ದುಲ್ ಚೌದ್ರಿ, ಮಾತನಾಡಿ, ತಮ್ಮ ಬೊಧನಾ ಕ್ರಮದ ಕುರಿತು ಸ್ಮರಿಸಿಕೊಂಡರು.

ಇದೇ ವೇಳೆ ಅಗಲಿದ ಶಿಕ್ಷಕರಿಗೆ ಸ್ಮರಿಸಿ, ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿಗಳಾದ ಉಸ್ಮಾನ್ ಗಣಿ, ವಿರೇಶ ಅಕ್ಕಿ, ಬಿ.ಸಿ ಮುರಾಳ, ಛಾಯಾ ಬಿರಾದಾರ, ಗೌಶೀಯಾ, ಸ್ನೇಹಲತಾ, ಅನಿತಾ, ಸಚಿನ್, ವಿರೇಶ ಪೇಠಕರ್, ಮಹೇಶ, ಸತೀಷ ಬಿ.ಎಲ್, ಸಂಗು ಕೆಂಡದ್, ಮಂಜು ಕುಲಕರ್ಣಿ, ಸಚಿನ್, ಚಂದ್ರಶೇಖರ ಚಲವಾದ, ಶ್ರೀಧರ, ವಿಜಯ ಗುತ್ತೆದಾರ, ರಮೇಶ ಗೌಡ್ರು, ಅಮೀತ, ವಿಶ್ವನಾಥ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಎಸ್.ಎನ್ ಕಂಗಳ, ಪ್ರಾಚಾರ್ಯ ಜಿಎಂ ಗಾಣಗೇರ, ಉಪ ಪ್ರಾಚಾರ್ಯ ಶಂಕರ ಲಮಾಣಿ, ಎಎಸೈ ಬಾಬು ರಾಠೋಡ ವೇದಿಕೆ ಮೇಲಿದ್ದರು. ಸಿದ್ದು ಹೆಬ್ಬಾಳ ನಿರೂಪಿಸಿದರು. ಅಸ್ಪಾಕ್ ಮುಜಾವರ್ ಸ್ವಾಗತಿಸಿದರು. ಪ್ರದೀಪ್ ಸುರಪುರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.