ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ಗ್ರಾಮಾಭಿವೃದ್ಧಿ ಎನ್‌ಎಸ್‌ಎಸ್‌ ಉದ್ದೇಶ’

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಉದ್ಘಾಟನೆ
Last Updated 1 ಜನವರಿ 2022, 7:22 IST
ಅಕ್ಷರ ಗಾತ್ರ

ಯಾದಗಿರಿ: ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಅಕ್ಟೋಬರ್ 2ರ 1969ರಂದು ಜಾರಿಗೆ ತರಲಾಯಿತು. ಇದರ ಮೂಲ ಉದ್ದೇಶ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.

ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ಮಹಿಳಾ ಮಹಾವಿದ್ಯಾಲಯದಲ್ಲಿ ಬಹು ಆಯಾಮ ಬಡತನ ಸಮೀಕ್ಷೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ 2020-21ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎನ್‌ಎಸ್‌ಎಸ್ ಸ್ವಚ್ಛತೆ, ಸಾಕ್ಷಾರತೆಯ ಅರಿವು, ಜನಸಂಖ್ಯಾ ಸಮಸ್ಯೆಯ ತಿಳಿವಳಿಕೆ, ಆರೋಗ್ಯ, ಮುಂತಾದ ವಿಷಯಗಳ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದವುದರ ಜತೆಗೆ ಯುವಕರಲ್ಲಿ ಸಹಬಾಳ್ವೆ, ನಾಯಕತ್ವದ ಗುಣಗಳು, ಗ್ರಾಮೀಣ ಸಮಸ್ಯೆಗಳ ಅರ್ಥೈಸುವಿಕೆ, ದೇಶ ಸೇವೆಯ ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಆತ್ಮಗೌರವದೊಂದಿಗೆ ಬದುಕುವುದನ್ನು ಕಲಿಸುತ್ತದೆ ಎಂದರು.

ಸರ್ಕಾರಿ ಪದವಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದೇವಿಂದ್ರಪ್ಪ ಹಳಿಮನಿ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂಬ ಮನೋಭಾವನೆಯೊಂದಿಗೆ ಯಾವುದೇ ಜಾತಿ, ಮತ, ಪಂಥ, ಎಂಬ ಭೇದ, ಭಾವ ಎಣಿಸದೆ ದೇಶದ ಒಬ್ಬ ಪ್ರಜೆಯಾಗಿ ನೆಲ, ಜಲ ಮತ್ತು ಇತರೆ ಪ್ರಾಕೃತಿಕ ಸಂಪತ್ತುಗಳನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಶ್ರೀನಿವಾಸ ದೊಡ್ಮನಿ ಮಾತನಾಡಿದರು.

ನಂತರ ಆರ್ಶಿವಚನ ನೀಡಿದ ಚಂದ್ರಶೇಖರ ಸ್ವಾಮೀಜಿ ಶಿಬಿರಾರ್ಥಿಗಳು ಸೇವಾ ಮನೋಭಾವ ಶಿಸ್ತು, ಸಂಯಮ, ಉತ್ತಮ ನಾಯಕತ್ವ, ಸಹೋದರೆತೆ, ಜಾತ್ಯತೀತೆ, ಭಾವಕ್ಯತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವಗಳನ್ನು ಬೆಳೆಸಿಕೊಂಡು ದೇಶದಲ್ಲಿನ ಬಡತನ, ನಿರುದ್ಯೋಗ, ಮೂಢನಂಬಿಕೆಗಳನ್ನು ಹೊಗಲಾಡಿಸುವುದರ ಮುಖಾಂತರ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ಅಲ್ಲದೇ ಮಹಿಳಾ ಶಿಬಿರಾರ್ಥಿಗಳಾಗಿರುವುದರಿಂದ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡಾಗ ಉತ್ತಮ ಸಮಾಜ ಕಟ್ಟಬಹುದೆಂದು ಹೇಳಿದರು

ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪಗೌಡ ಚೇಗುಂಟಾ ಸಸಿಗೆ ನೀರೆರುವುದರ ಜೊತೆಗೆ ಶಿಬಿರದ ಚಾಲನೆ ಮಾಡಿದರು. ಅಧ್ಯಕ್ಷತೆ ಪ್ರಾಂಶುಪಾಲ ಜಿ.ಎಂ.ವಿಶ್ವಕರ್ಮ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಯೋಜನಾಧಿಕಾರಿ ಸತೀಶ್ ಕುಮಾರ ಹವಲ್ದಾರ್, ಸುರೇಶ್ ಮಠ, ಬಸವರಾಜ ಜುಗೇರಿ, ವೆಂಕಟೇಶ್ ಕಲಾಲ್, ದೇವೀಂದ್ರಪ್ಪ, ಗೀತಾ ಪಾಟೀಲ, ಮಂಗಳಾ, ಸುಧಾ, ಸವಿತಾ, ವೈಶಾಲಿ, ರಾಜೇಶ್ವರಿ, ಸುಷ್ಮಾ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT