ಶಹಾಪುರ: ‘ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ರಾಜಕೀಯ ಮಾತಾಡುವುದರಲ್ಲಿ ಏನಿದೆ. ಟಿಕೆಟ್ ಕಳೆದುಕೊಂಡು ಸ್ವಲ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಬಟ್ಟೆ, ದಾಡಿ ನೋಡಿದರೆ ಅವರ ತಲೆ ಕೆಟ್ಟಿದೆ ಎಂಬುವುದು ಕಾಣುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಹಿಂದೂಗಳನ್ನು ಗುತ್ತಿಗೆ ಹಿಡಿದವರಂತೆ ಮಾತಾಡುವುದು ನಿಲ್ಲಿಸಿ. ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿ. ನನ್ನ ಕ್ಷೇತ್ರದಲ್ಲಿ ಹೆಚ್ಚಾಗಿ ಮಠ, ದೇಗುಲಕ್ಕೆ ₹15ಕೋಟಿ ಅನುದಾನ ಒದಗಿಸಿರುವೆ ಎಂಬುವುದನ್ನು ಮರೆಯಬೇಡಿ’ ಎಂದು ಅವರು ತಿರುಗೇಟು ನೀಡಿದರು.