ಸೈದಾಪುರ: ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲಾಗುವ ದೌರ್ಜನ್ಯಗಳನ್ನು, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವುದೆ ಸಭೆಯ ಪ್ರಮುಖ ಉದ್ದೇಶ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಅಭಿಪ್ರಾಯಪಟ್ಟರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿನ ದಲಿತರ ಮೇಲಾಗುವ ದೌರ್ಜನ್ಯಗಳನ್ನು ತಡೆಯಲು ಪ್ರತಿ ತಿಂಗಳಿಗೊಮ್ಮೆ ಜನರ ಬಳಿ ನೇರವಾಗಿ ಹೋಗಿ ಅವರ ಕುಂದು ಕೊರತೆಗಳನ್ನು ಆಲಿಸಿ ನಿಯಮಿತವಾಗಿ ಪರಿಹಾರ ನೀಡುವುದೆ ಸಭೆಯ ಮೂಲ ಉದ್ದೇಶವಾಗಿದೆ. ಅದರಂತೆ ನಿಮ್ಮ ನಿಮ್ಮ ಗ್ರಾಮಗಳಲ್ಲಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ನಮಗೆ ತಿಳಿಸಿದರೆ ನಾವು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು ತಕ್ಷಣವೇ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡುವುದು ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು’ ಎಂದರು.

‘ಮತ್ತೊಬ್ಬರ ಭಯದಲ್ಲಿ ಬದುಕು ಸಾಗಿಸದೆ ಅವರವರ ಆಸಕ್ತಿ ಮತ್ತು ಆದಾಯಕ್ಕೆ ಅನುಗುಣವಾಗಿ ನ್ಯಾಯಯುತವಾದ ಹಾಗೂ ಸ್ವತಂತ್ರವಾದ ಜೀವನ ಸಾಗಿಸಲು ಎಲ್ಲರಿಗೂ ಮುಕ್ತ ಅವಕಾಶವನ್ನು ಅಂಬೇಡ್ಕರ್ ಅವರು ಸಂವಿಧಾನ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಇಂತಹ ಸಭೆಯಲ್ಲಿ ಭಾಗವಹಿಸಿ ನಿಮ್ಮಲ್ಲಿನ ವಾಸ್ತವ ಸ್ಥಿತಿಗತಿಯನ್ನು ಮತ್ತು ಸಮಸ್ಯೆಗಳನ್ನು ಹೇಳಿ ಪರಿಹಾರವನ್ನು ಕಂಡುಕೊಳ್ಳುವುದರ ಜೊತೆಗೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು

ನಂತರ ದೌರ್ಜನ್ಯ ಸಲಹಾ ಸಮಿತಿಯ ಸದಸ್ಯ ಮರೆಪ್ಪ ಚಟ್ಟೇರಕರ್ ಮಾತನಾಡಿ, ‘ಸಮಾಜದಲ್ಲಿ ವಾಸಿಸುವವ ನಾವೆಲ್ಲರು ಸಮಾನರು. ಇಲ್ಲಿ ಮೇಲು ಕೀಳು ಎನ್ನುವುದು ವಾಸ್ತವದಲ್ಲಿರಬಾರದು. ದಲಿತರ ಬೆಳಕು ಅಂಬೇಡ್ಕರ್ ಈ ದೌರ್ಜನ್ಯ ತಡೆಯಲು ಅವರ ಜೀವನವೇ ಮುಡುಪಾಗಿಟ್ಟರು. ಹೀಗಾಗಿ ಶಾಂತಿಯುತವಾದ ಜೀವನ ನಡೆಸಲು ಸಮಾಜ ಮತ್ತು ಸಮುದಾಯದ ಜನರಲ್ಲಿ ಸಹಕಾರ ತುಂಬಾ ಮುಖ್ಯ. ಆಗ ಮಾತ್ರ ನಾವು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ’ ಎಂದರು.

ಇದಕ್ಕೂ ಮೊದಲು ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳ ಪರಿಶೀಲನೆ, ಜಮೀನು ಸಮಸ್ಯೆಗಳು, ಅಂಬೇಡ್ಕರ್ ಭವನ ನಿರ್ಮಾಣ ಮತ್ತು ಮೂಲಸೌಕರ್ಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಚೆನ್ನಬಸಪ್ಪ, ಡಿವೈಎಸ್ಪಿ ಸುರೇಶ, ಪಿಐ ರಾಜಶೇಖರ ಹಳಿಗೇರಾ, ಶಿವಾನಂದ ಎಂ.ಮರಡಿ, ಪಿಎಸ್ಐ ಭೀಮರಾಯ ಕೂಡ್ಲೂರು, ಪೇದೆ ರಾಜಕುಮಾರ್, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ದಸ್ತಗಿರಿ ನಾಯಕ, ಪಿಡಿಓ ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-30-1271294735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.