ಸೈದಾಪುರ: ‘ಬೇಸಿಗೆಯ ಬಿಸಿಲಿನ ಬೇಗೆಯಿಂದ ಜನಸಾಮಾನ್ಯರು, ದಾರಿಹೋಕರ ಬಾಯಾರಿಕೆಯನ್ನು ನೀಗಿಸುತ್ತಿರುವ ಮಿತ್ರರ ಕಾರ್ಯ ಶ್ಲಾಘನೀಯವಾದುದು’ ಎಂದು ಸಿದ್ದಚೇತನಾಶ್ರಮ ಸಿದ್ದಾರೂಢ ಮಠದ ಸೋಮೇಶ್ವರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಿತ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಪ್ರಾರಂಭಿಸಿದ ‘ಬಾಯಾರಿದವರಿಗೆ ನೀರು’ ಉಚಿತ ಶುದ್ಧ ಕುಡಿಯುವ ನೀರಿನ ಅರವಟಿಗೆಯ 4ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕರಿಗೆ ಯುಗಾದಿ ಹಬ್ಬದ ಅಂಗವಾಗಿ ಬೇವು-ಬೆಲ್ಲ ಹಾಗೂ ತಂಪು ನೀರು ನೀಡಿ ಮಾತನಾಡಿದರು.

ಮಿತ್ರಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರಗೌಡ ಹೆಗ್ಗಣಗೇರಾ ಮಾತನಾಡಿ, ‘2005ರ ಎಸ್ಎಸ್ಎಲ್ಸಿ ಹಳೆ ವಿದ್ಯಾರ್ಥಿಗಳ ಸಂಘವು ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡುತ್ತ ಬರುತ್ತಿದೆ’ ಎಂದರು.

ಈ ಸಂದರ್ಭದಲ್ಲಿ ವಿದ್ಯಾವರ್ಧಕ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಪಿಎಸ್ಐ ಭೀಮರಾಯ ಕೂಡ್ಲೂರು, ಯುವಮುಖಂಡ ರಾಜೇಶಶೆಟ್ಟಿ ಉಡುಪಿ, ರವಿಂದ್ರ ಕಡೇಚೂರು, ರಾಘವೇಂದ್ರ ಕಲಾಲ್, ವಿಜಯ ಕಂದಳ್ಳಿ, ಗುರುರಾಜ ಬಾಲಚೇಡ, ನಂದಗೋಪಾಲ ಪಟವಾರಿ, ದೇವು ಸೈದಣ್ಣೋರ್, ಕುಮಾರ ಚವ್ಹಾಣ, ಆಂಜನೇಯ ಸೈದಾಪುರ ಹಾಗೂ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-30-47198259

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.