ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ

Last Updated 6 ಆಗಸ್ಟ್ 2021, 4:28 IST
ಅಕ್ಷರ ಗಾತ್ರ

ಸೈದಾಪುರ: ಕೊರೊನಾದ 3ನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯ ಹೊರ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ತೆರೆಯಲಾದ ಚೆಕ್‍ಪೋಸ್ಟ್‌ಗಳಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಾಗಿದ್ದಾರೆ.

ಸಮೀಪದ ಕಡೇಚೂರು ಮತ್ತು ಕುಂಟಿಮರಿಗಳಲ್ಲಿ ತೆರೆಯಲಾದ ಚೆಕ್‍ಪೋಸ್ಟ್‌ಗಳಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಮಾತ್ರ ಇದ್ದರು. ಗಡಿ ಪ್ರಯಾಣಿಕ ಮತ್ತು ಜನರ ಕೊರೊನಾ ತಪಾಸಣೆ ನಡೆಯುತ್ತಿರಲಿಲ್ಲ. ಆಗಸ್ಟ್‌ 3ರಂದು ಪ್ರಜಾವಾಣಿಯಲ್ಲಿ ‘ಆರೋಗ್ಯ, ಕಂದಾಯ ಸಿಬ್ಬಂದಿ ಇಲ್ಲದ ಚೆಕ್‍ಪೋಸ್ಟ್‘ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು.

ಸುದ್ದಿ ಬಳಿಕ ಎಚ್ಚೆತ್ತಕೊಂಡ ಅಧಿ ಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ಸಿಬ್ಬಂದಿಯನ್ನು ಕರ್ತ ವ್ಯಕ್ಕೆ ನಿಯೋಜಿಸಿದ್ದಾರೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ನಿತ್ಯ ನೂರಾರು ಜನರು ಸೈದಾಪುರ ಬರುತ್ತಾರೆ. ಅವರನ್ನು ಗಡಿಯಲ್ಲಿ ತಡೆದು ಕೊರೊನಾ ನೆಗೆಟಿವ್ ವರದಿ, ಲಸಿಕೆ ಪಡೆದ ವಿವರ, ಥರ್ಮಲ್‌ ಸ್ಕ್ರೀನಿಂಗ್‌ ನಂತಹ ತಪಾಸಣೆ
ನಡೆಸಲಾಗುತ್ತದೆ.

ಹೊರ ರಾಜ್ಯಗಳಿಂದ ಒಳ ಬರುವ ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಸರಿಯಾದ ಮಾಹಿತಿ ನೀಡಿದ ನಂತರದ ಒಳ ಬಿಡಲಾಗುತ್ತದೆ. ಸೂಕ್ತ ಕಾರಣ ನೀಡದವರನ್ನು ಗಡಿಯಿಂದ ಹಿಂದಕ್ಕೆ ಕಳುಹಿಸಲಾಗುತ್ತಿದೆ ಎಂದು ಅಪರಾಧ ವಿಭಾಗದ ಪಿಎಸ್‍ಐ ಹಣಮಂತ್ರಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT