ಸೋಮವಾರ, 11 ಮೇ 2026
×
ADVERTISEMENT

ಸೈದಾಪುರ | ರಸ್ತೆ ಅತಿಕ್ರಮಣ: ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆ

ಮಲ್ಲಿಕಾರ್ಜುನ ಬಿ ಅರಿಕೇರಕರ್
Published : 13 ಏಪ್ರಿಲ್ 2026, 23:27 IST
Last Updated : 14 ಏಪ್ರಿಲ್ 2026, 4:24 IST
ADVERTISEMENT
ಫಾಲೋ ಮಾಡಿ
Comments
ಪಟ್ಟಣದ ಒಳ ರಸ್ತೆಗಳಲ್ಲಿ ಸಂಚರಿಸುವ ಭಾರಿ ಗಾತ್ರದ ವಾಹನಗಳಿಗೆ ಸಮಯ ನಿಗದಿಗೊಳಿಸಬೇಕು, ಕಿರಾಣಿ ಸೇರಿದಂತೆ ವಿವಿಧ ಅಂಗಡಿಗಳ ಮುಂದೆ ಅಡ್ಡಾದಿಡ್ಡಿಯಾಗಿ ನಿಲ್ಲುವ ದ್ವಿಚಕ್ರವಾಹನಗಳಿಗೆ ಕಡಿವಾಣ ಹಾಕಿ ಮತ್ತು ರಸ್ತೆ ಅತಿಕ್ರಮಣ ಮಾಡಿದವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು
ವಿಜಯ ಕಂದಳ್ಳಿ, ಸ್ಥಳೀಯ ನಿವಾಸಿ
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವು ನಿತ್ಯ ಹಾಗೂ ಹಬ್ಬ, ಸಂತೆ ದಿನ ಜನ ಮತ್ತು ವಾಹನಗಳಿಂದ ತುಂಬುತ್ತಿದೆ. ವ್ಯಾಪಾರಿಗಳು ಅಂಗಡಿಗಳಿದ್ದರೂ, ರಸ್ತೆ ಮೇಲೆ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸರಳ ಜನಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ. ಇವರ ವಿರುದ್ಧ ಅಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳಬೇಕು
ರಾಕೇಶ ಕೋರೆ ಸೈದಾಪುರ, ಗ್ರಾಂ.ಪಂ ಮಾಜಿ ಸದಸ್ಯ
ರಸ್ತೆ ಅತಿಕ್ರಮಣದ ಸಮಸ್ಯೆ ಕುರಿತು ನಮ್ಮ ಗಮನಕ್ಕೆ ಬಂದಿರುವುದಿಲ್ಲ, ತಕ್ಷಣವೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ
ಮಹಾದೇವ ಬಾಬಳಗಿ, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ 
ಈಗಾಗಲೇ ಎಲ್ಲಾ ಅಂಗಡಿಮುಂಗಟ್ಟುಗಳಿಗೆ ಸಾಮಾಗ್ರಿಗಳನ್ನು ತರುವ ದಾಸ್ತಾನು ವಾಹನಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆ ಕುರಿತು ಮಾಲೀಕರ ಜೊತೆಯಲ್ಲಿ ಚರ್ಚಿಸಿದ್ದೇವೆ. ಜೊತೆಗೆ ಶೀಘ್ರದಲ್ಲೇ ವಾಹನದಟ್ಟಣೆ ಪ್ರದೇಶದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿ ಜನ ಮತ್ತು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ
ಶಿವಾನಂದ ಮರಡಿ, ಪಿಐ ಸೈದಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT