ಶನಿವಾರ, ಮೇ 30, 2020
27 °C

ಎರಡನೇ ದಿನ ₹1.50 ಕೋಟಿ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮದ್ಯ ಮಾರಾಟದ ಎರಡನೇ ದಿನವಾದ ಮಂಗಳವಾರವೂ ಜಿಲ್ಲೆಯಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ₹1.50 ಕೋಟಿ ವಹಿವಾಟು ನಡೆದಿದೆ.  ಸೋಮವಾರ ಕೇವಲ ಆರು ತಾಸುಗಳಲ್ಲಿ ₹1 ಕೋಟಿ ವಹಿವಾಟು ನಡೆದಿತ್ತು.  

ಸಿಎಲ್‌–2ರಲ್ಲಿ 18,760 ಲೀಟರ್ ಲಿಕ್ಕರ್, ಸಿಎಲ್‌–11ರಲ್ಲಿ 4,851 ಲಿಕ್ಕರ್, ಸಿಎಲ್‌–02ರಲ್ಲಿ 6,604 ಲೀಟರ್ ಬಿಯರ್, ಸಿಎಲ್‌–11ರಲ್ಲಿ 1,463 ಲೀಟರ್‌ ಬಿಯರ್ ಮಾರಾಟವಾಗಿದೆ.

ಇದರಿಂದ ಎರಡೇ ದಿನದಲ್ಲಿ ₹2.50 ಕೋಟಿ ವಹಿವಾಟು ನಡೆದಂತಾಗಿದೆ.

‘ಜಿಲ್ಲೆಯಲ್ಲಿ ಮಂಗಳವಾರವೂ ಸರಾಗವಾಗಿ  ಮದ್ಯ ಮಾರಾಟ ನಡೆದಿದೆ. ಬುಧವಾರದಿಂದ ಹೊಸ ಸ್ಟಾಕ್‌ ಬರಲಿದೆ. ಆಗ ಸರ್ಕಾರಕ್ಕೆ ಲಾಭದ ಬಗ್ಗೆ ತಿಳಿದು ಬರಲಿದೆ. ಎರಡು ದಿನಗಳಲ್ಲಿ ಮಾರಾಟವಾಗಿರುವುದು ಲಾಕ್‌ಡೌನ್‌ಗಿಂತ ಮುಂಚಿತವಾಗಿ ಸಂಗ್ರಹ ಇರುವುದಾಗಿದೆ. ಹೀಗಾಗಿ ಇದು ಸರ್ಕಾರಕ್ಕೆ ಲಾಭದ ಪ್ರಶ್ನೆ ಬರುವುದಿಲ್ಲ ಎಂದು ಅಬಕಾರಿ ಪ್ರಭಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್‌ ‘ಪ್ರಜಾವಾಣಿ’ ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.