ಸೋಮವಾರ, ಆಗಸ್ಟ್ 2, 2021
19 °C

ಬೀಜ, ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟಮಾಡಿದರೆ ಪರವಾನಗಿ ರದ್ದು: ದೇವಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಮತ್ತು ರಸಗೊಬ್ಬರ ಕೀಟನಾಶಕಗಳನ್ನು ಜಿಲ್ಲೆಯ ರೈತರಿಗೆ ಮಾತ್ರ ಮಾರಾಟ ಮಾಡಬೇಕು. ಬೀಜ, ಗೊಬ್ಬರ ಬೇರೆ ಜಿಲ್ಲೆಗೆ ಮಾರಾಟ
ಮಾಡಿದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌ ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಭಾಗದ ತಾಲ್ಲೂಕುಗಳಿಂದ ಬೇರೆ ಜಿಲ್ಲೆಯ ರೈತರಿಗೆ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಜಿಲ್ಲೆಗೆ ನಿಗದಿಪಡಿಸಿದ ಬಿ.ಟಿ ಹತ್ತಿ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬೇರೆ ಜಿಲ್ಲೆಯ ರೈತರಿಗೆ ನೀಡುವ, ಪರಿಕರ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮಕೈಗೊಂಡು ಅವರಿಗೆ ನೀಡಿದ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.